ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

ಕಾಸರಗೋಡು: ಮೀನು ಹಿಡಿಯಲು ಸಮುದ್ರ ದಡದಲ್ಲಿ ನಿಂತು ಬಲೆ ಬೀಸಿದ ವೇಳೆ ಅಲೆಯಲ್ಲಿ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾದ ಮೊಗ್ರಾಲ್ ಪುತ್ತೂರು ಕಾವುಗೋಳಿ ಕಡಪ್ಪುರ ನಿವಾಸಿ ವಿನೋದ್ (38)ರ ಮೃತದೇಹ ಮೊಗ್ರಾಲ್ ಪುತ್ತೂರು ಸಮುದ್ರ ಕಿನಾರೆ ಬಳಿ ನಿನ್ನೆ ಪತ್ತೆಯಾಗಿದೆ. ಕಾಸರಗೋಡು ಕರಾವಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ  ಮಹಜರು ನಡೆಸಿದ ಬಳಿಕ  ಮೃತದೇಹ ವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ  ಮರಣೋತ್ತರ ಪರೀಕ್ಷೆಗೊಳ ಪಡಿಸಲಾಯಿತು.

ರಾಮ-ಕಲ್ಯಾಣಿ ದಂಪತಿಯ ಪುತ್ರನಾಗಿರುವ ವಿನೋದ್ ಸಹೋದರ-ಸಹೋದರಿಯರಾದ ಪ್ರಭಾಕರ, ಲಲಿತ, ಸರಸ್ವತಿ, ಕಮಲಾಕ್ಷಿ, ಶ್ಯಾಮಿನಿ, ವಾಸುದೇವ, ದೇವಯಾನಿ, ಜಯಶ್ರೀ ಹಾಗೂ ಅಪಾರ ಬಂದು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page