ಸಮುದ್ರದಲ್ಲಿ ಸ್ನಾನಕ್ಕಿಳಿದ ಯುವಕ ಅಲೆಗೆ ಸಿಲುಕಿ ಸಾವು

ಕಾಸರಗೋಡು: ಸ್ನೇಹಿತ ರೊಂದಿಗೆ ಸಮುದ್ರದಲ್ಲಿ ಸ್ನಾನಕ್ಕಿಳಿದ ಯುವಕ ಸಮುದ್ರದ ಬಲವಾದ ಅಲೆಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಪಡನ್ನಕ್ಕಾಡ್ ನಿವಾಸಿ ನದೀಂ ಇಸ್ಮಾಯಿಲ್ (೩೩) ಸಾವನ್ನಪ್ಪಿದ ದುರ್ದೈವಿ. ನೀಲೇಶ್ವರಕ್ಕೆ ಸಮೀಪದ ಮರಕ್ಕಾಪು ಬೀಚ್‌ನಲ್ಲಿ ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ.

ಸಮುದ್ರದ ಅಲೆಗೆ ಸಿಲುಕಿದ ನದೀಂ ಇಸ್ಮಾಯಿಲ್‌ನನ್ನು ಇತರ ಸ್ನೇಹಿತರು ಮತ್ತು ಊರವರು ಸೇರಿ ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಪ್ರಾಣ ಉಳಿಸಲು ಸಾಧ್ಯಾಗಲಿಲ್ಲ. ಪಡನ್ನಕ್ಕಾಡ್ ನಶಕ್ತಿ ರಸ್ತೆಯ ತಸ್ನಿ ಮಂಜಿಲ್‌ನ ಎನ್.ಕೆ. ಇಸ್ಮಾಯಿಲ್ ಹಾಜಿ-ಸುಬೈದಾ ದಂಪತಿ ಪುತ್ರನಾಗಿರುವ ಮೃತ ನದೀಂ ಸಹೋದರ ತಹಸೀನ್ ಮತ್ತು ತಸ್ನಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page