ಸರಕಾರಿ ಸಾರಿಗೆ ಬಸ್ ದರ ಏರಿಕೆ ಹಿಂಪಡೆಯಬೇಕು- ಅಶ್ವಿನಿ ಎಂ.ಎಲ್

ಮಂಜೇಶ್ವರ: ಕರ್ನಾಟಕ ಆರ್‌ಟಿಸಿ ಬಸ್ ದರವನ್ನು ಇತ್ತೀಚೆಗೆ ಏರಿಸಲಾಗಿದ್ದು, ಇದರಿಂದ ಅಂತಾರಾಜ್ಯ ಪ್ರಯಾಣಿಕರಿಗೆ, ವಿಶೇಷವಾಗಿ ಗಡಿ ಜಿಲ್ಲೆಯಾದ ಕಾಸರಗೋಡು ಪ್ರದೇಶದ ಜನತೆಗೆ ತೀವ್ರ ಸಂಕಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯ ಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್ ಆಗ್ರಹಿಸಿದ್ದಾರೆ. ಶೇಕಡಾ ೧೫ರಷ್ಟು ದರ ಏರಿಕೆಯಾಗಿದ್ದು, ಕೇರಳ ಮತ್ತು ಕರ್ನಾಟಕ ನಡುವಿನ ಒಪ್ಪಂದದ ಪ್ರಕಾರ ಕೇರಳ ಆರ್‌ಟಿಸಿ ಕೂಡಾ ದರವೂ ಏರಿಸಿದೆ. ಕರ್ನಾಟಕದಲ್ಲಿ  ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಪರಿಚಯಿಸಿರುವುದರಿಂದ ಸಾರಿಗೆ ನಿಗಮದ ವೆಚ್ಚದಲ್ಲಿ ಹೆಚ್ಚಳವಾಗಿದೆ. ಈ ಹೆಚ್ಚುವರಿ ಹೊರೆಯನ್ನು ಸಮತೋಲನಗೊಳಿಸಲು ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಕುಟುಂಬಗಳಿಗೆ ಉಚಿತ ಪ್ರಯಾಣದ ಪ್ರಯೋಜನ ಲಭಿಸದೆ ಮನೆ ಬಜೆಟ್ ಮೇಲೆ ತೀವ್ರ ಆರ್ಥಿಕ ಒತ್ತಡ ಉಂಟಾಗುತ್ತಿದೆ. ಸಿದ್ಧರಾಮಯ್ಯ ಸರಕಾರದ ಈ ದರ ಏರಿಕೆಯನ್ನು ಜನವಿರೋಧಿ ಕ್ರಮ ಎಂದು ಟೀಕಿಸಿರುವ ಅಶ್ವಿನಿ ಎಂ.ಎಲ್. ಈ ನಿರ್ಧಾರದ ವಿರುದ್ಧ ಶೀಘ್ರವೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

RELATED NEWS

You cannot copy contents of this page