ಸರ್ಕಲ್ ಸಹಕಾರಿ ಯೂನಿಯನ್‌ನಿಂದ ಸಹಕಾರಿ ಸಂಗಮ

ಕಾಸರಗೋಡು: ಕಾಸರಗೋಡು ಸರ್ಕಲ್ ಸಹಕಾರಿ ಯೂನಿಯನ್‌ನ ನೇತೃತ್ವದಲ್ಲಿ ಸಹಕಾರಿ ಸಂಗಮ ನಡೆಸಲಾಯಿತು. ಕೇರಳ ಬ್ಯಾಂಕ್ ಆಡಳಿತ ಸಮಿತಿ ಸದಸ್ಯ ಬಾಬು ಎಬ್ರಹಾಂ ಉದ್ಘಾಟಿಸಿದರು. ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಆರ್. ಜಯಾನಂದನ್ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲ ಪಿ.ವಿ. ರಾಜೇಶ್ ತರಗತಿ ನಡೆಸಿದರು. ಅಸಿಸ್ಟೆಂಟ್ ರಿಜಿಸ್ಟ್ರಾರ್‌ಗಳಾದ ಎ. ರವೀಂದ್ರ, ಕೆ. ನಾಗೇಶ್, ಅಸಿಸ್ಟೆಂಟ್ ಡೈರೆಕ್ಟರ್ ಎ. ಜಯಚಂದ್ರನ್, ವಿವಿಧ ಸಹಕಾರಿ ಸಂಘ ಪದಾಧಿಕಾರಿಗಳಾದ ನ್ಯಾಯವಾದಿ ಎಸಿ ಅಶೋಕ್ ಕುಮಾರ್, ಕೆ.ಪಿ. ಬಲರಾಮನ್ ನಾಯರ್, ಪಿ. ಜಾನಕಿ, ಪಿ.ಕೆ. ವಿನೋದ್ ಕುಮಾರ್, ಪಿ. ರಾಜನ್ ನಾಯರ್ ಮಾತನಾಡಿದರು.

You cannot copy contents of this page