ಸರ್ವೆ ನಡೆಸುತ್ತಿದ್ದ ವೇಳೆ ಹೊಳೆ ನೀರಿಗೆ ಬಿದ್ದು ಸರ್ವೇಯರ್ ದಾರುಣ ಸಾವು

ಅಡೂರು: ಸರ್ವೇ ಕೆಲಸದಲ್ಲಿ ನಿರತರಾಗಿದ್ದ ವೇಳೆ ಅಕಸ್ಮಾತ್ ಜಾರಿ ಹೊಳೆ ನೀರಿಗೆ ಬಿದ್ದು ಸರ್ವೇಯರ್ ದಾರುಣವಾಗಿ ಸಾವನ್ನಪ್ಪಿದ ಘಟನೆ ಅಡೂರು ಬಳಿ ನಡೆದಿದೆ.

ಆಲಪ್ಪುಳ ಚೆರಿಯನಾಡು ಮಾಂಬ್ರ ತುಂಬಿನಾಲ್ ವೀಟಿಲ್‌ನ ಟಿ.ಆರ್. ತುಳಸೀಧರನ್- ಶೀಲಾ ದಂಪತಿ ಪುತ್ರ ಟಿ. ನಿಖಿಲ್ (28) ಸಾವನ್ನಪ್ಪಿದ ದುರ್ದೈವಿ ಯುವಕ.

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಒಳಪಡಿಸಿ ರಾಜ್ಯ ಕಿರು ನೀರಾವರಿ ಇಲಾಖೆ ಅಡೂರಿಗೆ ಸಮೀ ಪದ ಪಳ್ಳಂಗೋಡಿನಲ್ಲಿ ರೆಗ್ಯುಲೇಟರ್ (ಅಣೆಕಟ್ಟು) ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದು, ಅದರಂತೆ ಪ್ರಸ್ತುತ ಯೋಜನೆಗಾಗಿ ಪಳ್ಳಂಗೋಡು ಪಯ ಸ್ವಿನಿ ಹೊಳೆ ಬದಿ ಡಿಜಿಟಲ್ ಸರ್ವೆ ಆರಂಭಿಸಲಾಗಿತ್ತು. ಅದರಂತೆ ನಿನ್ನೆ ಸರ್ವೆ ಕೆಲಸದಲ್ಲಿ ಇತರರ ಜೊತೆ ತೊಡಗಿದ್ದ ನಿಖಿಲ್, ಆ ವೇಳೆ ಹೊಳೆ ಪಕ್ಕದ ಬಂಡೆ ಕಲ್ಲಿನ ಮೇಲಿನಿಂದ  ಅಕಸ್ಮಾತ್ ಜಾರಿ ಹೊಳೆನೀರಿಗೆ ಬಿದ್ದಿದ್ದಾರೆ. ಅದನ್ನು ಕಂಡ ಆ ಸರ್ವೇ ತಂಡದಲ್ಲಿದ್ದ ಇತರ ಸಿಬ್ಬಂದಿಗಳಿಗೆ ನಿಖಿಲ್‌ರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಬಳಿಕ ಕುಟ್ಟಿಕೋಲು ಮತ್ತು ಕಾಸರಗೋಡು ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ನಿಖಿಲ್‌ರನ್ನು ನೀರಿನಿಂದ ಮೇಲಕ್ಕೆತ್ತಿ ದರೂ, ಆ ವೇಳೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಹೊಳೆಯ ಎರಡು ಭಾಗಗಳಲ್ಲಾಗಿ ತಲಾ ಎರಡು ಮಂದಿ ಯಂತೆ ಸರ್ವೆ ಕೆಲಸ ಆರಂಭಿಸಿದ್ದರು. ಆ ವೇಳೆ ಅವರೆಲ್ಲಾ ಮೊದಲು ಲೈಫ್ ಜಾಕೆಟ್ ಧರಿಸಿದ್ದರು. ಮಧ್ಯಂತರದ ವೇಳೆ ಅವರು ಜಾಕೆಟ್ ಕಳಚಿ ಕೆಳಗಿದ್ದ ಹೊಳೆ ಪಕ್ಕದ ಬಂಡೆಕಲ್ಲಿನ ಮೇಲೆ ವಿಶ್ರಾಂತಿ ಪಡೆಯತೊಡಗಿದರು. ಆ ವೇಳೆ ನಿಖಿಲ್ ಎದ್ದು ನಿಲ್ಲಲೆತ್ನಿಸಿದಾಗ  ಕಾಲು ಜಾರಿ ಹೊಳೆ ನೀರಿಗೆ ಬಿದ್ದರೆಂದು ಅವರ ಜೊತೆ ಗಿದ್ದ ಇತರ ಸಿಬ್ಬಂದಿಗಳು ತಿಳಿಸಿದ್ದಾರೆ.

ಕೊಚ್ಚಿಯನ್ನು ಕೇಂದ್ರವನ್ನಾಗಿಸಿ ಕಾರ್ಯವೆಸಗುತ್ತಿರುವ ‘ಎಸ್ಟಿಮ್’ ಕಂಪೆನಿಗೆ ಈ ಸರ್ವೆಯ ಮೇಲ್ವಿಚಾರಣೆ ನೀಡಲಾಗಿದೆ. ಆ ಕಂಪೆನಿಗಾಗಿ ಸರ್ವೆ ಕೆಲಸದ ಉಪ ಗುತ್ತಿಗೆಯನ್ನು ‘ಒರಿಜಿನ್’ ಎಂಬ ಸಂಸ್ಥೆಗೆ ನೀಡಲಾಗಿತ್ತು. ಆ ಸಂಸ್ಥೆಯ ಸರ್ವೆ ಸಿಬ್ಬಂದಿಯಾಗಿದ್ದಾರೆ. ಮೃತ ನಿಖಿಲ್. ಇವರ ಮೃತದೇಹವನ್ನು ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಮೃತರ ಮನೆಯವರು ಕಾಸರಗೋಡಿಗೆ ಆಗಮಿಸಿದ್ದು,  ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಮೃತರು ಹೆತ್ತವರ ಹೊರತಾಗಿ ಸಹೋದರ ನಿಧೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page