ಸವಾಕ್ ಜಿಲ್ಲಾ ಸಮ್ಮೇಳನ: ಪದಾಧಿಕಾರಿಗಳ ಆಯ್ಕೆ
ಕಾಸರಗೋಡು: ಸ್ಟೇಜ್ ಆರ್ಟಿಸ್ಟ್ ವರ್ಕರ್ಸ್ ಅಸೋಸಿಯೇ ಶನ್ ಆಫ್ ಕೇರಳದ (ಸವಾಕ್) ಜಿಲ್ಲಾ ಸಮ್ಮೇಳನ ಕಾಸರಗೋಡು ಉಡುಪಿ ಗಾರ್ಡನ್ಸ್‌ನಲ್ಲಿ ಜರಗಿತು. ಸವಾಕ್ ಜಿಲ್ಲಾ ಅಧ್ಯಕ್ಷ ಉಮೇಶ ಎಂ. ಸಾಲಿಯಾನ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಪ್ರಧಾನ ಕಾರ್ಯ ದರ್ಶಿ ಸುದಶನನ್ ಉದ್ಘಾಟಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ವಿನೋದ್ ಅಂಜುಬಿತ ವರದಿ ಮಂಡಿಸಿದರು. ಉದಯನ್ ಕುಂಡಂಗುಳಿ, ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ ಅತಿಥಿಗಳಾಗಿ ಭಾಗವಹಿಸಿದರು. ಹಿರಿಯ ಕಲಾವಿದರಾದ ಟಿ.ವಿ. ಗಂಗಾಧರನ್, ಬ್ರಹ್ಮವಾಹಕ ಲಕ್ಷ್ಮೀಕಾಂತ್ ಅಗ್ಗಿತ್ತಾಯ, ಕತೆಗಾರ ಅನಿಲ್ ನೀಲಾಂಬರಿ ಮೊದಲಾದ ವರನ್ನು ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ ಗೌರವಿಸಿ ದರು. ರಾಜ್ಯ ಸಮಿತಿ ಉಪಾಧ್ಯಕ್ಷ ನ್ಯಾ ಯವಾದಿ ವಿಜಯನ್ ಉಪಸ್ಥಿತರಿ ದ್ದರು. ಜೀನ್ ಲವೀನಾ ಮೊಂತೇರೊ, ನರಸಿಂಹ ಬಲ್ಲಾಳ್ ಶುಭ ಕೋರಿದರು. ಸವಾಕ್ ರಾಜ್ಯ ಕಾರ್ಯದರ್ಶಿ ಎಂ.ಎಂ. ಗಂಗಾಧರನ್ ಚಟುವಟಿಕಾ ವರದಿ ಮಂಡಿಸಿದರು. ಜಿಲ್ಲಾ ಕೋಶಾಧಿಕಾರಿ ಚಂದ್ರಹಾಸ ಕಯ್ಯಾರು ಆಯ-ವ್ಯಯ ಮಂಡಿಸಿದರು. ಜಿಲ್ಲಾ ಉಪಾಧ್ಯಕ್ಷ ದಿವಾಕರ ಪಿ ಸ್ವಾಗತಿಸಿ, ಉಪಾಧ್ಯಕ್ಷ ದಯಾ ಪಿಲಿಕುಂಜೆ ವಂದಿಸಿದರು. ಕಲಾವಿದರಿಂದ ಜನಪದ ಹಾಡು, ನೃತ್ಯಗಳು, ಕಿರು ನಾಟಕ ಪ್ರದರ್ಶನಗೊಂಡಿತು.
೬೦ ವರ್ಷ ಪೂರ್ತಿಯಾದ ಕಲಾವಿದರಿಗೆ ಕ್ಷೇಮನಿಧಿಯಲ್ಲಿ ಸೇರಲು ಒಂದು ಅವಕಾಶ ನೀಡಬೇಕು, ೧೦ ಗಂಟೆಯ ಬಳಿಕ ಕಲಾ ಕಾರ್ಯಕ್ರಮಗಳನ್ನು ಪ್ರದರ್ಶಿಸಲು ಮೈಕ್ ಉಪಯೋಗಿ ಸಬಾರದು ಎಂಬ ಕಾನೂನು ರದ್ದುಗೊಳಿಸಬೇಕು, ಪಿಂಚಣಿ ಮೊತ್ತವನ್ನು ೫೦೦೦ ರೂ. ಆಗಿ ಹೆಚ್ಚಿಸಬೇಕು ಮೊದಲಾದ ಬೇಡಿಕೆಗಳ ಠರಾವನ್ನು ಸರಕಾರಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳಾಗಿ ಉಮೇಶ್ ಎಂ. ಸಾಲಿಯಾನ್ (ಜಿಲ್ಲಾ ಅಧ್ಯಕ್ಷ), ಎಂ.ಎಂ. ಗಂಗಾಧರನ್ (ಪ್ರಧಾನ ಕಾರ್ಯದರ್ಶಿ), ಚಂದ್ರಹಾಸ ಕಯ್ಯಾರ್ (ಕೋಶಾಧಿಕಾರಿ), ಉಪಾಧ್ಯಕ್ಷ ಜೀನ್ ಲವೀನಾ ಮೊಂತೇರೊ, ದಿವಾಕರ ಪಿ, ನರಸಿಂಹ ಬಲ್ಲಾಳ್, ಭಾರತೀಬಾಬು, ಕಾರ್ಯದರ್ಶಿಗಳಾಗಿ ಮೋಹಿನಿ ಉಪ್ಪಳ, ಸುಜಾತ ಶೆಟ್ಟಿ, ದಯಾ ಪಿಲಿಕುಂಜೆ, ಶೈಜು ಬೇಕಲ್ ಎಂಬಿವರನ್ನು ಆಯ್ಕೆ ಮಾಡಲಾಯಿತು.