ಸಹಕಾರಿ ಇಲಾಖೆಯ ಅನುಮತಿಯಿಲ್ಲದೆ ಬಾಡಿಗೆಗೆ ತೆಗೆದು ಸಿದ್ಧಪಡಿಸಿದ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘ ಕಚೇರಿ ಕಟ್ಟಡ ಉದ್ಘಾಟನೆಗೆ ಅಸಿಸ್ಟೆಂಟ್ ರಿಜಿಸ್ಟ್ರಾರ್ ಸಹಿತ ನಾಲ್ವರು ಸಹಕಾರಿ ನೌಕರರು
ಕುಂಬಳೆ:ಸಹಕಾರಿ ಇಲಾಖೆಯ ಅನುಮತಿಯಿ ಲ್ಲದೆ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘವನ್ನು ಈ ಹಿಂದೆ ಸ್ಥಳಾಂತರಿಸಿದ ಕಚೇರಿಕಟ್ಟಡದ ಔಪಚಾರಿಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಹಕಾರಿ ಇಲಾಖೆಯ ಇಬ್ಬರು ಅಸಿಸ್ಟೆಂಟ್ ರಿಜಿಸ್ಟ್ರಾರ್‌ಗಳು ಹಾಗೂ ಇಬ್ಬರು ಇನ್‌ಸ್ಪೆಕ್ಟರ್‌ಗಳು ಭಾಗವಹಿಸಲಿ ದ್ದಾರೆ. ಸಹಕಾರಿ ಇಲಾಖೆಯ ಅನುಮತಿಯಿಲ್ಲದೆ ಸ್ಥಾಪಿಸಿದ ಲಾಕರ್‌ನ ಉದ್ಘಾಟನೆ ಅಸಿಸ್ಟೆಂಟ್ ರಿಜಿಸ್ಟ್ರಾರ್ ಎಂ. ರವೀಂದ್ರ ನೆರವೇರಿಸುವರು. ಠೇವಣಿ ಸಂಗ್ರಹ ಇನ್ನೋರ್ವ ಅಸಿಸ್ಟೆಂಟ್ ರಿಜಿಸ್ಟ್ರಾರ್ ಕೆ. ರಾಜಗೋಪಾಲ್ ನಿರ್ವಹಿಸುವರು.
ಇನ್‌ಸ್ಪೆಕ್ಟರ್ ಗಳಾದ ವಿ. ಸುನಿಲ್ ಕುಮಾರ್ ಹಾಗೂ ಬಾಬುರಾಜ್ ಉಪಸ್ಥಿತರಿರುವರು. ವ್ಯಾಪಕ ಭ್ರಷ್ಟಾಚಾರ ಹಾಗೂ ವ್ಯಕ್ತಿಪಲ್ಲಟ ನಡೆಸಿ ಸಾಲ ತೆಗೆಯುವುದು, ಕಾನೂನು ಉಲ್ಲಂಘಿಸಿ ಸಾಲ ನೀಡುವುದು, ಅದನ್ನು ನವೀಕರಿಸುವುದು, ಬಳಿಕ ಸಾಲ ನೀಡಿದ ಮೊತ್ತ ಮರಳಿ ಲಭಿಸದೇ ಇರುವ ಸ್ಥಿತಿಯನ್ನು ಈ ಸಂಸ್ಥೆ ಎದುರಿಸುತ್ತಿದೆಯೆಂದು ಸಹಕಾರಿ ಇಲಾಖೆ ಇತ್ತೀಚೆಗೆ ವರದಿ ಮಾಡಿತ್ತು. ಸಹಕಾರಿ ಸಂಘದ ಕಚೇರಿ ಕಟ್ಟಡವನ್ನು ಸ್ಥಳಾಂತರಿಸುವಾಗ ಇಲಾಖೆಯ ಮುಂಚಿತ ಅನುಮತಿ ಪಡೆಯಬೇಕೆಂಬ ನಿರ್ದೇಶವನ್ನು ಅವಗಣಿಸಿ ಸಾರ್ವಜನಿಕರ ಹಣವನ್ನು ಅನುಮತಿಯಿಲ್ಲದೆ ಬ್ಯಾಂಕ್‌ನಿಂದ ತೆಗೆದು ಲಾಕರ್ ಖರೀದಿಸಿರುವುದು ಹಾಗೂ ಇಂಟೀರಿಯರ್ ಕೆಲಸಗಳಿಗಾಗಿ ಖರ್ಚು ಮಾಡಿದ ೭ ಲಕ್ಷ ರೂಪಾ ಯಿಗಳನ್ನು ಮರಳಿ ಪಾವತಿಸಬೇ ಕೆಂದು ನಿರ್ದೇಶಿಸಿದ ಸಂಸ್ಥೆಯ ಲಾಕರ್ ಸಂಘದ ಪದಾಧಿಕಾರಿಗಳು ಅಸಿಸ್ಟೆಂಟ್ ರಿಜಿಸ್ಟ್ರಾರ್‌ರ ಮೂಲಕ ವೇ ಉದ್ಘಾಟಿಸಲು ನಿರ್ಧರಿಸಿದ್ದಾರೆ.
ಕಾರ್ಯಕ್ರಮವನ್ನು ೭ರಂದು ಬೆಳಿಗ್ಗೆ ೧೧ಕ್ಕೆ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರೆಂದೂ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರೆಂದು ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಲಾಗಿದೆ. 34 ಮಂದಿ ಮಾತನಾಡುವರು. ಇದೇ ವೇಳೆ ಸಂಘದಲ್ಲಿ ನಡೆದ ಹಣಕಾಸು ವಂಚನೆಗಳ ಕುರಿ ತು ಪೊಲೀಸರು ತನಿಖೆ ಆರಂಭಿ ಸಿದ್ದಾರೆ.