ಸಹಪಾಠಿ ವಿದ್ಯಾರ್ಥಿನಿ ವಿಷಯದಲ್ಲಿ ತರ್ಕ: ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ;5 ಮಂದಿಗೆ ಗಾಯ
ಕಾಸರಗೋಡು: ಸಹಪಾಠಿ ಯಾದ ವಿದ್ಯಾರ್ಥಿನಿಯೊಬ್ಬಳ ವಿಷಯದಲ್ಲಿ ಹುಟ್ಟಿಕೊಂಡ ವಿವಾದ ಸಹಪಾಠಿಗಳ ಮಧ್ಯೆ ಹೊಡೆದಾಟ ದಲ್ಲಿ ಕೊನೆಗೊಂಡಿದೆ. ಹೊಡೆದಾಟ ದಲ್ಲಿ ಕಾಸರಗೋಡು ನಿವಾಸಿಗಳಾದ ಐದು ಮಂದಿ ಗಾಯಗೊಂಡಿದ್ದಾರೆ.
ಕೊಚ್ಚಿಯ ಕೆಳ ಮುಳ್ಳೇರಿಯ ಅಪಾರ್ಟ್‌ಮೆಂಟ್‌ನಲ್ಲಿ ಇಂಟರ್ನ್‌ಶಿಪ್‌ಗೆ ತಲುಪಿದ ಮಂಗ ಳೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ನಡೆದಿದೆ. ಕಾಸರಗೋಡು ನಿವಾಸಿಗಳಾದ ಶಾಸಿಲ್, ಅಜಿನಾಸ್, ಸೈಫುದ್ದೀನ್, ಮಿಶಾಲ್, ಅಪ್ಸಲ್ ಎಂಬಿವರು ಗಂಭೀರ ಗಾಯಗೊಂಡಿದ್ದಾರೆ.
ನಿನ್ನೆ ಮುಂಜಾನೆ 2.15ರ ವೇಳ ಸೀಪೋರ್ಟ್ ಏರ್‌ಪೋರ್ಟ್ ರಸ್ತೆ ಸಮಿಪ ಅಪ್ಸಲ್ ಎಂಬವರ ಮಾಲಕತ್ವ ದಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಹೊಡೆದಾಟ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಗಳ ಸ್ನೇಹಿತ ದೇವನಂದು ಹಾಗೂ ನಾಲ್ಕು ಮಂದಿ ಸೇರಿ ಹಲ್ಲೆಗೈ ದುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಕಳಮಶ್ಶೇರಿ ಪೊಲೀಸರು ಕೊಲೆಯತ್ನ ಮೊಕದ್ದಮೆ ದಾಖಲಿಸಿ ಕೊಂಡಿದ್ದಾರೆ.