ಸಹೋದರನಿಗೆ ಹಲ್ಲೆಗೈದುದನ್ನು ಪ್ರಶ್ನಿಸಿದ ಯುವಕನ ಇರಿದು ಕೊಲೆ
ಕೊಲ್ಲಂ: ಸಹೋದರ, ಗೆಳೆಯನನ್ನು ಆಕ್ರಮಣಗೈದಿರು ವುದನ್ನು ಪ್ರಶ್ನಿಸಿದ ಯುವಕನನ್ನು ಇರಿದು ಕೊಲೆಗೈಯ್ಯಲಾಗಿದೆ. ಕೊಲ್ಲಂ ಕಣ್ಣನಲ್ಲೂರ್ ಮೊಟ್ಟಾ ಯಿಕಾವ್ ನಿವಾಸಿ ನವಾಸ್ (35) ಕೊಲೆಗೀಡಾದವರು. ನಿನ್ನೆ ರಾತ್ರಿ ಘಟನೆ ನಡೆದಿದೆ. ನವಾಸ್‌ನ ಸಹೋದರ ನಬೀಲ್ ಹಾಗೂ ಗೆಳೆಯ ಅನಸ್ ವಿರುದ್ಧ ಮುಟ್ಟಾಯಿಕಾವ್‌ನ ಆಟೋ ಚಾಲಕನಾದ ಇನ್ನೋರ್ವ ಗೆಳೆಯನ ಗೃಹಪ್ರವೇಶದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಮಧ್ಯೆ ದಾರಿಯಲ್ಲಿ ತಂಡವೊಂದು ತಡೆದು ನಿಲ್ಲಿಸಿ ಆಕ್ರಮಿಸಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ರಾತ್ರಿ 10.30ರ ವೇಳೆ ನವಾಸ್ ಆಕ್ರಮಣ ನಡೆದ ಸ್ಥಳಕ್ಕೆ ತಲುಪಿ ವಿಷಯವನ್ನು ಪ್ರಶ್ನಿಸಿದಾಗ ಆತನಿಗೆ ಇರಿದು ಕೊಲೆಗೈಯ್ಯಲಾಗಿದೆ. ಘಟನೆಯಲ್ಲಿ ಪ್ರಧಾನ ಆರೋಪಿ ಸದ್ದಾಂ ಹಾಗೂ ಇತರರನ್ನು ಪೊಲೀಸರು ಬಂಧಿಸಿದ್ದಾರೆ.