ಸಹೋದರರಿಗೆ ತಂಡದಿಂದ ಹಲ್ಲೆ : 10 ಮಂದಿ ವಿರುದ್ಧ ಕೇಸು

ಬದಿಯಡ್ಕ: ನೆಲ್ಲಿಕಟ್ಟೆಯಲ್ಲಿ ಇಬ್ಬರು ಸಹೋದರರಿಗೆ ತಂಡ ವೊಂದು ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ನೆಲ್ಲಿಕಟ್ಟೆ ನಿವಾಸಿಗಳಾದ ನಿಜಾಮುದ್ದೀನ್  (23), ಸಹೋದರ ಅಜ್ಮಲ್ ಎಂಬಿವರಿಗೆ ಮೊನ್ನೆ ತಂಡ ಹಲ್ಲೆಗೈದು ಕಲ್ಲಿನಿಂದ ಜಜ್ಜಿ  ಗಾಯಗೊಳಿಸಿರುವುದಾಗಿ ದೂರಲಾಗಿದೆ. ಗಾಯಗೊಂಡ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಈ ಇಬ್ಬರು ಸಹೋದರರು ನೆಲ್ಲಿಕಟ್ಟೆ ತಾಜ್  ಕಾಂಪ್ಲೆಕ್ಸ್ ಬಳಿ ನಿಂತಿದ್ದ ವೇಳೆ ಅಲ್ಲಿಗೆ ತಲುಪಿದ 10 ಮಂದಿ ತಂಡ ಹಲ್ಲೆಗೈದಿದೆ. ಈ ಸಂಬಂಧ ಸಕರಿಯ, ಅಶ್ರಫ್, ಶರೀಫ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ಐದು ಮಂದಿ ವಿರುದ್ಧ ಕೇಸು ದಾಖಲಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page