ಸಹೋದರಿ ಮಗನ ಮದುವೆಗೆ ತೆರಳಿದ ನಿವೃತ್ತ ಬ್ಯಾಂಕ್ ಉದ್ಯೋಗಿ ಕುಸಿದುಬಿದ್ದು ಮೃತ್ಯು
ಮುಳ್ಳೇರಿಯ: ಸಹೋದರಿಯ ಮಗನ ಮದುವೆ ಮನೆಯಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಕಾಞಂಗಾಡ್ ಅದಿಯಾಂ ಬೂರ್ ನಂದನಂ ನಿವಾಸ್‌ನ ಪ್ರಭಾಕರನ್ ಎಂ (60) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಎಸ್‌ಬಿಐ ಕಾಞಂಗಾಡ್ ಶಾಖೆಯ ನಿವೃತ್ತ ಉದ್ಯೋಗಿಯಾಗಿದ್ದಾರೆ. ಇವರ ಸಹೋದರಿಯೂ ಬೆಳ್ಳೂರು ನೆಟ್ಟಣಿಗೆ ನಿವಾಸಿಯಾದ ಸುಮತಿಯವರ ಮಗನ ಮದುವೆ ನಿನ್ನೆ ಮಡಿಕೇರಿ ಬಳಿ ಕರಿಕೆ ಎಂಬಲ್ಲಿ ನಡೆದಿತ್ತು. ಅಲ್ಲಿಂದ ವಧು-ವರನ ಜೊತೆ ನೆಟ್ಟಣಿಗೆಯ ಮನೆಗೆ ಪ್ರಭಾಕರನ್ ಬಂದಿದ್ದರು. ನಿನ್ನೆ ಸಂಜೆ ವೇಳೆ ಅಲ್ಲಿ ಪ್ರಭಾಕರನ್ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮಾಲಿಂಗ ನಾಯ್ಕ-ಯಶೋದ ಬಾ ದಂಪತಿಯ ಪುತ್ರನಾದ ಮೃತರು ಪತ್ನಿ ಅನ್ನಪೂರ್ಣೇಶ್ವರಿ, ಮಕ್ಕಳಾದ ಪ್ರಣವ್, ಹರ್ಷ, ಸಹೋದರ-ಸಹೋದರಿಯರಾದ ಮೋಹನ್‌ರಾಜ್, ಮನೋಜ್ ಕುಮಾರ್, ದಯಾನಂದ , ಜಯಂತಿ, ಗೀತಾ,ಸುಮತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.