ಸಾಮಾಜಿಕ ಕಲ್ಯಾಣ ಪಿಂಚಣಿ ಎಗರಿಸಿದ ಸರಕಾರಿ ಸಿಬ್ಬಂದಿಗಳ ವಿರುದ್ಧ ವಿಜಿಲೆನ್ಸ್ ತನಿಖೆ ಆರಂಭ: ತುರ್ತು ವರದಿ ಕೇಳಿ ಉನ್ನತ  ಮಟ್ಟದ ಸಭೆ ಕರೆದ ಮುಖ್ಯಮಂತ್ರಿ

ತಿರುವನಂತಪುರ: ಬಡವರಿಗಾ ಗಿರುವ ಸಾಮಾಜಿಕ ಕಲ್ಯಾಣ ಪಿಂಚಣಿಯನ್ನು ಅನರ್ಹವಾಗಿ ಪಡೆಯುತ್ತಿರುವ ಸರಕಾರಿ ಸಿಬ್ಬಂದಿ ಗಳು ಹಾಗೂ ಇತರರು ಒಳಗೊಂಡ ಸಮಗ್ರ ವರದಿಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯ ನ್ ರಾಜ್ಯ ಹಣಕಾಸು ಸಚಿವಾಲಯಕ್ಕೆ ತುರ್ತು ನಿರ್ದೇಶ ನೀಡಿದ್ದಾರೆ.
ಮಾತ್ರವಲ್ಲ ಈ ಬಗ್ಗೆ ಚರ್ಚೆ ನಡೆಸಿ ಅನುಸರಿಸಬೇಕಾದ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಇಂದು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಸಾಮಾಜಿಕ ಕಲ್ಯಾಣ ಪಿಂಚಣಿಯನ್ನು ಅನರ್ಹವಾಗಿ ಪಡೆದು ಲಪಟಾಯಿ ಸಿದ ಸರಕಾರಿ ಸಿಬ್ಬಂದಿಗಳ ವಿರುದ್ಧ ರಾಜ್ಯ ವಿಜಿಲೆನ್ಸ್ ತನಿಖೆ ಆರಂಭಿಸಿದೆ.
ಇದರAತೆ ಮಲಪ್ಪುರಂ ಜಿಲ್ಲೆಯ ಕೋಟೆಕ್ಕಲ್ನಲ್ಲಿ ಮೊದಲ ತನಿಖೆಗೆ ಚಾಲನೆ ನೀಡಲಾಗಿದೆ. ಕೋಟೆಕ್ಕಲ್ ನಗರಸಭೆಯ ಏಳನೇ ವಾರ್ಡ್ನಲ್ಲಿ ಪಿಂಚಣಿ ಪಡೆಯುತ್ತಿರುವವರ ಪೈಕಿ ಶೇ. 92ರಷ್ಟು ಮಂದಿ ಪಿಂಚಣಿ ಅನರ್ಹರಾಗಿರುವುದಾಗಿ ವಿಜಿಲೆನ್ಸ್ ಪತ್ತೆಹಚ್ಚಿದೆ.
2000 ಸ್ಕ್ವಾರ್ ಫೀಟ್ಗಿಂತ ಹೆಚ್ಚು ವಿಸ್ತೀರ್ಣದ ಮನೆ ಹೊಂದಿರುವವರು, ಹವಾನಿಯಂತ್ರಣ (ಎಸಿ) ಚಾಲಿತ ಮನೆ ಹೊಂದಿರುವವರು, ವರ್ಷಕ್ಕೆ ಒಂದು ಲಕ್ಷ ರೂ.ಗಿಂತಲೂ ಹೆಚ್ಚು ಆದಾಯ ಹೊಂದಿರುವವರು, ಕಾರು ಇತ್ಯಾದಿ ವಾಹನಗಳು ಇರುವವರು ಈ ಕಲ್ಯಾಣ ಪಿಂಚಣಿಗೆ ಅರ್ಹರಲ್ಲ ಎಂದು ಪಿಂಚಣಿ ನಿಬಂಧನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ರಾಜ್ಯ ಹಣಕಾಸು ಇಲಾಖೆ ನೀಡಿದ ನಿರ್ದೇಶ ಪ್ರಕಾರ ಇನ್ಫರ್ಮೇಶನ್ ಕೇರಳ ಮಿಷನ್ ನಡೆಸಿದ ತನಿಖೆಯಲ್ಲಿ ರಾಜ್ಯದಲ್ಲಿ 1458 ಸರಕಾರಿ ಸಿಬ್ಬಂದಿಗಳು ಹಾಗೂ ಕಳೆದ ವರ್ಷ ಸಿಎಜಿ ನಡೆಸಿದ ತನಿಖೆಯಲ್ಲಿ 9201 ಸರಕಾರಿ ಸೇವೆಯಲ್ಲಿರುವ ಸಿಬ್ಬಂದಿಗಳು ಅನರ್ಹರಾಗಿ ಕಲ್ಯಾಣ ಪಿಂಚಣಿ ಪಡೆಯುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಸರಕಾರದ ಲೆಕ್ಕಾಚಾರ ಪ್ರಕಾರ ರಾಜ್ಯದಲ್ಲಿ 62 ಲಕ್ಷ ಮಂದಿ ತಿಂಗಳಿಗೆ ತಲಾ 1600 ರೂ.ನಂತೆ ಕಲ್ಯಾಣ ಪಿಂಚಣಿ ಪಡೆಯುತ್ತಿದ್ದಾರೆ. ಇದರಂತೆ ಪ್ರತೀ ತಿಂಗಳು 9000 ಕೋಟಿ ರೂ.ವನ್ನು ಪಿಂಚಣಿ ವಿತರಣೆಗಾಗಿ ವಿನಿಯೋಗಿಸಲಾಗುತ್ತಿದೆ.
ಅನರ್ಹವಾಗಿ ಕಲ್ಯಾಣ ಪಿಂಚಣಿ ಪಡೆಯುತ್ತಿರುವ ಸರಕಾರಿ ಸಿಬ್ಬಂದಿಗಳಿAದ ಆ ಹಣವನ್ನು ಅವರ ವೇತನದಿಂದಲೇ ಮರು ವಸೂಲಿ ಮಾಡುವ ಕ್ರಮ ಕೈಗೊಳ್ಳಲಾಗುವು ದೆಂದು ರಾಜ್ಯ ಹಣಕಾಸು ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page