ಸಾಯಿ ಗ್ರಾಮ ಮನೆಗಳ ಕೀಲಿ ಕೈ ಹಸ್ತಾಂತರ ಶೀಘ್ರ: ಪೂರ್ವಸಿದ್ಧತೆ ಚರ್ಚೆ

ಪೆರ್ಲ: ಎಣ್ಮಕಜೆ ಪಂಚಾ ಯತ್‌ನಲ್ಲಿ ಸತ್ಯಸಾಯಿ ಓರ್ಫನೇಜ್ ಟ್ರಸ್ಟ್ ಎಂಡೋಸಲ್ಫಾನ್ ಸಂತ್ರಸ್ತರಿ ಗಾಗಿ ನಿರ್ಮಿಸಿದ ಮನೆಗಳ ಕೀಲಿ ಕೈ ಹಸ್ತಾಂ ತರದ ಪೂರ್ವಭಾವಿಯಾಗಿ ಸಿದ್ಧತೆಗಳನ್ನು ವಿವರಿಸಲು ಜಿಲ್ಲಾಧಿಕಾರಿ ಕೆ. ಇಂಭಶೇ ಖರ್ ಸಭೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯ ಮಿನಿ ಕಾನ್ಫರೆನ್ಸ್ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಫಲಾನುಭವಿಗಳ, ಸಾಯಿ ಟ್ರಸ್ಟ್ ಪದಾಧಿಕಾರಿಗಳ, ಅಧಿಕಾರಿಗಳು   ಭಾಗವಹಿಸಿದರೂ ಎಣ್ಮಕಜೆ ಪಂ., ಕುಟುಂಬಶ್ರೀ ಮಿಶನ್ ಜಂಟಿಯಾಗಿ ಯೋಜನೆ ಮನೆಗಳನ್ನು ಕೊನೆಯ  ಹಂತದ ಶುಚೀಕರಣ ನಡೆಸಲಿದೆ.  ಈ ಮನೆಗಳಿಗೆ ಜಲಜೀವನ್ ಮಿಶನ್ ಮೂಲಕ ಕುಡಿಯುವ ನೀರು ವಿತgಣೆ ಖಚಿತಪಡಿಸಲಾಗಿದೆ. ವಾಟರ್ ಟ್ಯಾಂಕ್ ಸ್ಥಾಪಿಸಲಾಗಿದೆ. ವಿದ್ಯುತ್ ಸಂಪರ್ಕ ನೀಡಲಾಗಿದೆ. ಫಲಾನುಭವಿ ಗಳ ಉಪಸ್ಥಿತಿಯಲ್ಲಿ ಪೂರ್ಣ ವಾಗಿ ಶುಚಿಗೊಳಿಸಿದ ಬಳಿಕ ಕೀಲಿ ಕೈ ಹಸ್ತಾಂ ತರ ನಡೆಸಲಿದೆಯೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪಂಚಾಯತ್ ನೇತೃತ್ವದಲ್ಲಿ ಸಿಸಿ ಟಿವಿ ಕ್ಯಾಮರ ಸಜ್ಜುಗೊಳಿಸಲು, ಬೀದಿ ದೀಪಗಳನ್ನು ಸಿದ್ಧಪಡಿಸಲು ಜಿಲ್ಲಾಧಿ ಕಾರಿ ನಿರ್ದೇಶಿಸಿದರು. ಭದ್ರತೆ ಖಚಿತ ಪಡಿಸಲು ಬದಿಯಡ್ಕ ಪೊಲೀಸ್ ನೈಟ್ ಪಟ್ರೋಲಿಂಗ್ ನಡೆಸುತ್ತಿದ್ದಾರೆ.

RELATED NEWS

You cannot copy contents of this page