ಸಾರ್ವಜನಿಕ ಪ್ರದೇಶದಲ್ಲಿ ಟ್ಯಾಂಕರ್ ಲಾರಿಯಲ್ಲಿ ಮಲಿನಜಲ ತಂದು ಹಾಕಲೆತ್ನಿಸಿದ ವ್ಯಕ್ತಿ ಸೆರೆ
ಕಾಸರಗೋಡು: ವಿದ್ಯಾನಗರ ಬಳಿಯ ಬೆಳ್ಳೂರಡ್ಕದ ಸಾರ್ವ ಜನಿಕ ಪ್ರದೇಶದಲ್ಲಿ ರಾತ್ರಿ ಮರೆ ಯಲ್ಲಿ ಟ್ಯಾಂಕರ್ ಲಾರಿ ಯಲ್ಲಿ ಮಲಿನಜಲ ತಂದು ಹಾಕಲೆತ್ನಿ ಸಿದ ವ್ಯಕ್ತಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿ ಕೇಸು ದಾಖಲಿಸಿದ್ದಾರೆ. ಮುಟ್ಟತ್ತೋ ಡಿಯ ಬಷೀರ್ ಅಬ್ದುಲ್ಲ (48) ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಟ್ಯಾಂಕರ್ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.