ಸಿನಿಮಾ ಕಥೆಗಾರ ನಿಸಾಂ ರಾವುತರ್ ನಿಧನ

ಕಾಸರಗೋಡು: ಜ್ಯೂನಿಯರ್ ಹೆಲ್ತ್ ಇನ್‌ಸ್ಪೆಕ್ಟರ್ ಆಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ, ಕಥೆ, ಚಿತ್ರಕಥೆ ಎಂಬೀ ವಲಯಗಳಲ್ಲಿ ಮಲಯಾಳ ಸಿನಿಮಾದಲ್ಲಿ ಸಕ್ರಿಯರಾಗಿದ್ದ  ನಿಸಾಂ ರಾವುತರ್ (೪೯) ಹೃದಯಾಘಾ ತದಿಂದ ನಿಧನಹೊಂದಿದರು. ಅವರು ಕೊನೆಯದಾಗಿ ಚಿತ್ರಕಥೆ ರಚಿಸಿದ ‘ಒರು ಸರ್ಕಾರ್ ಉಲ್ಪನ್ನಂ’ ಎಂಬ ಸಿನಿಮಾ ರಿಲೀಸ್ ಆಗಲಿರುವಂ ತೆಯೇ ಪತ್ತನಂತಿಟ್ಟ ಕಡಮನಿಟ್ಟ ದಲ್ಲಿರುವ ಸ್ವ ವಸತಿಯಲ್ಲಿ  ಇಂದು ಮುಂಜಾನೆ ನಿಧನ ಸಂಭವಿಸಿದೆ.  ಮೊಗ್ರಾಲ್ ಪುತ್ತೂರು, ಕುಂಬಳೆ, ಮುಳ್ಳೇರಿಯ ಮೊದಲಾದ ಆಸ್ಪತ್ರೆಗಳಲ್ಲಿ ಇವರು ಹೆಲ್ತ್ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದು, ಎಂಡೋಸಲ್ಫಾನ್ ವಿಷಯದಲ್ಲಿ ಸಂತ್ರಸ್ತರಿಗಾಗಿ ಹಲವು ಕಾರ್ಯ ಕೈಗೊಂಡಿದ್ದರು.

You cannot copy contents of this page