ಸಿನಿಮಾ ಶೈಲಿಯಲ್ಲಿ ಸಾಹಸಿಕವಾಗಿ ನಿಷೇಧಿತ ಹೊಗೆಸೊಪ್ಪು ಉತ್ಪನ್ನ ವಶ: ಓರ್ವ ಸೆರೆ

ತಿರುವನಂತಪುರ: ನೆಯ್ಯಾಟಿಂಗರ ದಲ್ಲಿ ಕಾರಿನಲ್ಲಿ ಸಾಗಿಸಲು ಯತ್ನಿಸಿದ 1000 ಕಿಲೋ ನಿಷೇಧಿತ ಹೊಗೆಸೊಪ್ಪು ಉತ್ಪನ್ನಗಳನ್ನು ಅಬಕಾರಿ ತಂಡ ವಶಪಡಿಸಿದೆ. ಕಾರೈಕ ಮಂಟಪ ನಿವಾಸಿ ರಫೀಕ್‌ನನ್ನು ಸೆರೆ ಹಿಡಿಯಲಾಗಿದೆ. ಸಿನಿಮೀಯ ಮಾದರಿಯಲ್ಲಿ ಕಾರನ್ನು ಬೆನ್ನಟ್ಟಿ ಆರೋಪಿಯನ್ನು ಸೆರೆ ಹಿಡಿಯ ಲಾಗಿದೆ. ಹೊಗೆಸೊಪ್ಪು ಉತ್ಪನ್ನಗಳನ್ನು ಸಾಗಿಸಲೆತ್ನಿಸುತ್ತಿರು ವುದಾಗಿ ಲಭಿಸಿದ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಈತನ ಕಾರನ್ನು ಅಬಕಾರಿ ಅಧಿಕಾರಿಗಳು ಬೆನ್ನಟ್ಟಿ ದರು. ನೆಯ್ಯಾಟಿಂಗರಕ್ಕೆ ತಲುಪುವಾಗ ಕಾರನ್ನು ಅಡ್ಡ ನಿಲ್ಲಿಸಿದರು. ಈ ವೇಳೆ ವಾಹನಗಳಿಗೆ ಢಿಕ್ಕಿ ಹೊಡೆಸಿ ಪರಾರಿ ಯಾಗಲು ಆರೋಪಿ ಯತ್ನಿಸಿದ್ದಾನೆ. ಇದು ಪರಾಭವಗೊಂಡ ಹಿನ್ನೆಲೆಯಲ್ಲಿ ಕಾರಿನಿಂದ ಇಳಿದು ಓಡಲು ಆರಂಭಿಸಿ ದಾಗ ಅಧಿಕಾರಿಗಳು ಸಾಹಸಿಕವಾಗಿ ಸೆರೆ ಹಿಡಿದಿದ್ದಾರೆ. ಈ ಮಧ್ಯೆ ಓರ್ವ ಅಬಕಾರಿ ಅಧಿಕಾರಿ ಗಾಯಗೊಂಡಿದ್ದಾರೆ.

RELATED NEWS

You cannot copy contents of this page