ಸಿಪಿಎಂನ ಸಮ್ಮೇಳನ ವೇದಿಕೆಯಲ್ಲಿ ಇ.ಕೆ. ನಾಯನಾರ್‌ರ ವೇಷ ಧರಿಸಲು ಹೋದ ಕಲಾವಿದ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕೊಲ್ಲಂ: ಕೊಲ್ಲಂನಲ್ಲಿ ನಡೆಯುತ್ತಿರುವ ಸಿಪಿಎಂ ರಾಜ್ಯ ಸಮ್ಮೇಳನ ವೇದಿಕೆಯಲ್ಲಿ ಹಮ್ಮಿಕೊಂಡ ದೃಶ್ಯಾವಿಷ್ಕಾರದಲ್ಲಿ ಸಿಪಿಎಂನ ಜನಪ್ರಿಯ ನೇತಾರ ಇ.ಕೆ. ನಾಯನಾರ್‌ರ ವೇಷ ಧರಿಸಲೆಂದು ಕಣ್ಣೂರಿನಿಂದ ತೆರಳಿದ ಕಲಾವಿದ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪಯ್ಯನ್ನೂರು ನಿವಾಸಿ ಎಂ. ಮಧುಸೂದನನ್ ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕೊಲ್ಲಂ ನಗರದ ಹೋಟೆಲ್ ಕೊಠಡಿಯಲ್ಲಿ ಇವರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪ್ರಮೋದ್ ಪಯ್ಯನ್ನೂರು ಎಂಬವರು ದೃಶ್ಯಾವಿಷ್ಕಾರದ ಸಂಘಟಕನಾಗಿದ್ದಾರೆ. ದೃಶ್ಯಾವಿಷ್ಕಾರ ನಿನ್ನೆ ನಡೆಯಲಿರುವಂತೆಯೇ ಮಧುಸೂದನನ್ ನಾಪತ್ತೆಯಾಗಿದ್ದರು. ಇದರಿಂದ ಕಾರ್ಯಕ್ರಮದ ಇತರ ಕಲಾವಿದರು ಅವರಿಗೆ ಫೋನ್ ಕರೆಮಾಡಿದರೂ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ನಡೆಸಿದ ಶೋಧ ವೇಳೆ ಹೋಟೆಲ್ ಕೊಠಡಿಯಲ್ಲಿ ಮಧುಸೂದನನ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ.