ಸಿಪಿಎಂ ಜಿಲ್ಲಾ ಸಮ್ಮೇಳನ ಸ್ನೇಹನಿಲಯಕ್ಕೆ ಶಿಲಾನ್ಯಾಸ
ಉಪ್ಪಳ: ಸಿಪಿಎಂ ಕಾಸರ ಗೋಡು ಜಿಲ್ಲಾ ಸಮ್ಮೇಳನದಂಗವಾಗಿ ಮಂಜೇಶ್ವರ ಏರಿಯಾ ಸಮಿತಿ ನಿರ್ಮಿಸಿ ನೀಡುವ ಸ್ನೇಹ ನಿಲಯಕ್ಕೆ ಶಿರಿಯಾದಲ್ಲಿ ಶಿಲಾನ್ಯಾಸ ನಡೆಯಿತು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್ ಉದ್ಘಾಟಿಸಿ ದರು. ಸಾದಿಕ್ ಚೆರುಗೋಳಿ ಅಧ್ಯಕ್ಷತೆ ವಹಿಸಿದರು. ಏರಿಯಾ ಕಾರ್ಯದರ್ಶಿ ವಿ.ವಿ. ರಮೇಶನ್, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ, ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್, ಬೇಬಿ ಶೆಟ್ಟಿ ಮಾತನಾಡಿದರು. ಅಬ್ದುಲ್ ಹಾರಿಸ್ ಸ್ವಾಗತಿಸಿದರು.