ಸಿಪಿಎಂ ತೊರೆದು ಕಾಂಗ್ರೆಸ್ ಸೇರಿದ ಕಾರ್ಯಕರ್ತರಿಗೆ ಡಿಸಿಸಿ ಕಚೇರಿಯಲ್ಲಿ ಸ್ವಾಗತ
ಕಾಸರಗೋಡು: ಸಿಪಿಎಂನ ಕೊಲೆ ರಾಜಕೀಯವನ್ನು ಪ್ರತಿಭಟಿಸಿ ಸಿಪಿಎಂ ಮುಖಂಡರು ಕಾಂಗ್ರೆಸ್‌ಗೆ ಸೇರಿದ್ದಾರೆ. ಕೊಲೆ ಕೃತ್ಯದಲ್ಲಿ ಆರೋಪಿಗಳಾಗಿ ನ್ಯಾಯಾಲಯ ಶಿಕ್ಷೆ ಘೋಷಿಸಿದ ಅಪರಾಧಿಗಳಿಗೆ ಸಂರಕ್ಷಣೆ ನೀಡುವ ಸಿಪಿಎಂ ನೀತಿಯನ್ನು ಪ್ರತಿಭಟಿಸಿ ಜಾತ್ಯಾತೀತ ನಿಲುವುಗಳನ್ನು ಎತ್ತಿ ಹಿಡಿಯುವ ಕಾಂಗ್ರೆಸ್ ನೀತಿಯಲ್ಲಿ ಆಕರ್ಷಿತರಾಗಿ ಮಂಜೇಶ್ವರ ಸಿಪಿಎಂ ಏರಿಯಾ ಸಮಿತಿ ಮಾಜಿ ಸದಸ್ಯ, ಕೆಎಸ್‌ಕೆಟಿಯು ಮಾಜಿ ಏರಿಯಾ ಕಾರ್ಯದರ್ಶಿ ಹಾಗೂ ಪ್ರಸ್ತುತ ಸಿಐಟಿಯು ಜನರಲ್ ವರ್ಕರ್ಸ್ ಯೂನಿಯನ್ ಜಿಲ್ಲಾ ಉಪಾಧ್ಯಕ್ಷನಾಗಿರುವ ಫಾರೂಕ್ ಶಿರಿಯರ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಇವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಇವರ ಜೊತೆಯಲ್ಲಿ ಅಶ್ರಫ್ ಮುಟ್ಟಂ, ಬಂಬ್ರಾಣ ಲೋಕಲ್ ಸಮಿತಿ ಸದಸ್ಯನಾಗಿದ್ದ ಲತೀಫ್ ಪಿ.ಕೆ.ನಗರ್, ರಿಯಾಸ್ ಆಲಕ್ಕೋಡ್, ಡಿ. ಬಶೀರ್, ಜಾವೇದ್ ಮುಟ್ಟಂ, ಲತೀಫ್ ಶಿರಿಯ, ಮೊಹಮ್ಮದ್ ಯೂಸಫ್ ಓನಂದ, ಜಾಫರ್ ತಂಙಳ್, ಅಬ್ದುಲ್ಲ ಪಚ್ಚಂಬಳ, ಮುಹಮ್ಮದ್ ಮೇರ್ಕಳ ಎಂಬಿವರು ಸಿಪಿಎಂಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರಿದವರು. ಕಾರ್ಯಕ್ರಮದಲ್ಲಿ ಸೇವಾದಳ ರಾಜ್ಯ ಅಧ್ಯಕ್ಷ ರಮೇಶನ್ ಕರ್ವಾಚೇರಿ, ಡಿಸಿಸಿ ಕಾರ್ಯದರ್ಶಿಗಳಾದ ಎಂ.ಸಿ. ಪ್ರಭಾಕರನ್, ಸೋಮಶೇಖರ ಜೆ.ಎಸ್, ಎಂ. ಕುಂಞಂಬು ನಂಬ್ಯಾರ್, ಗೀತಾ ಕೃಷ್ಣನ್, ಡಿ.ಎಂ.ಕೆ. ಮುಹಮ್ಮದ್, ಮಂಜುನಾಥ ಆಳ್ವ, ಎಂ. ರಾಜೀವನ್ ನಂಬ್ಯಾರ್, ಮನಾಫ್ ನುಳ್ಳಿಪ್ಪಾಡಿ, ಲಕ್ಷ್ಮಣ ಪ್ರಭು, ಮನ್ಸೂರ್, ಎ.ಕೆ. ಶಶಿಧರನ್, ಉಸ್ಮಾನ್ ಅಣಂಗೂರು ಭಾಗವಹಿಸಿದರು.