ಸಿಪಿಎಂ- ಬಿಜೆಪಿ ಘರ್ಷಣೆ: ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಬಾಂಬ್ ಸ್ಫೋಟ
ಕಣ್ಣೂರು: ರಾಜಕೀಯ ಘರ್ಷಣೆ ಭುಗಿಲೆದ್ದ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸಲು ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ದಿಢೀರ್ ಆಗಿ ಬಾಂಬ್ ಸ್ಫೋಟ ಉಂಟಾದ ಘಟನೆ ಕಣ್ಣೂರಿನ ಚಿರಕಲ್‌ನಲ್ಲಿ ಇಂದು ಮುಂಜಾನೆ ನಡೆದಿದೆ.
ಚಿರಕಲ್‌ನಲ್ಲಿ ನಿನ್ನೆ ಎರಡು ರಾಜಕೀಯ ಪಕ್ಷಗಳ ಮಧ್ಯೆ ಘರ್ಷಣೆ ಭುಗಿಲೆದ್ದಿದೆ. ಅದನ್ನು ನಿಯಂತ್ರಿಸಲು ಪೊಲೀಸರು ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಅದರ ಮುಂದುವರಿಕೆಯಾಗಿ ಪೊಲೀಸರು ಇಂದು ಮುಂಜಾನೆ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ರಸ್ತೆ ಬಳಿ ದಿಢೀರ್ ಆಗಿ ಎರಡು ಐಸ್‌ಕ್ರೀಮ್ ಬಾಂಬ್‌ಗಳು ಸ್ಫೋಟಗೊಂಡಿವೆ. ಆದರೆ ಯಾರಿಗೂ ಗಾಯವುಂಟಾಗಿಲ್ಲ. ಆ ಕೂಡಲೇ ಭಾರೀ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿ ಎಲ್ಲೆಡೆಗಳಲ್ಲಿ ಇನ್ನಷ್ಟು ಭದ್ರತೆ ಏರ್ಪಡಿಸಿದ್ದಾರೆ. ಮಾತ್ರವಲ್ಲ ಬಾಂಬ್ ಸ್ಫೋಟ ನಡೆಸಿದವರ ಪತ್ತೆಗಾಗಿಯೂ ತೀವ್ರ ಶೋ ಆರಂಭಿಸಿದ್ದಾರೆ. ಚಿರಕಲ್‌ನಲ್ಲಿ ಪಕ್ಷದ ಧ್ವಜಗಳನ್ನು ಸ್ಥಾಪಿಸುವ ವಿಷಯದಲ್ಲಿ ನಿನ್ನೆ ಬಿಜೆಪಿ ಮತ್ತು ಸಿಪಿಎಂ ಮಧ್ಯೆ ರಾಜಕೀಯ ಘರ್ಷಣೆ ಭುಗಿಲೆದ್ದಿತು. ವಿಷಯ ತಿಳಿದ ಪೊಲೀಸರು ಆ ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಮಾತ್ರವಲ್ಲ ಘರ್ಷಣೆ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಅದರಂತೆ ಅವರು ಇಂದು ಮುಂಜಾನೆ 3 ಗಂಟೆಗೆ ಗಸ್ತು ತಿರುಗುತ್ತಿದ್ದ ವೇಳೆ ಈ ಬಾಂಬ್ ಸ್ಫೋಟ ನಡೆದಿದೆ.