ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದಲ್ಲಿ ಪುಸ್ತಕ ವಾರಾಚರಣೆ ಆರಂಭ

ಕಾಸರಗೋಡು: ನಗರದ ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸಾರ್ವಜನಿಕ ವಾಚನಾಲಯದಲ್ಲಿ ಪುಸ್ತಕ ವಾರಾಚರಣೆ ಪ್ರಾರಂಭ ವಾಯಿತು. ನಗರದ ಬಿಇಎಂ ಶಾಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಜರಗಿತು. ಬಿಇಎಂ ಹೈಯರ್ ಸೆಕೆಂಡರಿ ಪ್ರಾಂಶುಪಾಲ ರಾಜೇಶ್ ಚಂದ್ರ ಕೆ.ಪಿ. ಉದ್ಘಾಟಿಸಿ ಮಾತನಾಡಿದರು. ಹೈಸ್ಕೂಲ್ ಅಧ್ಯಾಪಿಕೆ ರಕ್ಷಿತಾ ಬಿ.ಎಂ, ಗ್ರಂಥಾಲಯ ಸಂಚಾಲಕಿ ಸಂಧ್ಯಾ ರಾಣಿ ಟೀಚರ್ ಪ್ರಾತ್ಯಕ್ಷಿಕೆ ನೀಡಿದರು. ಹೈಯರ್ ಸೆಕೆಂಡರಿ ಪ್ರಾಧ್ಯಾಪಕ ಶಿಜಿನ್ ವಿದ್ಯಾರ್ಥಿಗಳಿಗೆ ಪುಸ್ತಕ ವಾರಾಚರಣೆಯ ಮಹತ್ವ ತಿಳಿಸಿದರು. ಮಕ್ಕಳು ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ  ಕನ್ನಡ ಭವನ ಪ್ರಕಾಶನದ ಸಮಾಜ ಸಂಪದ ಪುಸ್ತಕ ನೀಡಲಾಯಿತು. ಚೈತಾಲಿ ಅಣಂಗೂರ್ ಸ್ವಾಗತಿಸಿ, ಮನೀಶ್ ರಾಜ್ ವಂದಿಸಿದರು. ಸಂಧ್ಯಾರಾಣಿ ಟೀಚರ್ ನಿರೂ ಪಿಸಿದರು.

Leave a Reply

Your email address will not be published. Required fields are marked *

You cannot copy content of this page