ಸೀತಾಂಗೋಳಿಯಲ್ಲಿ ಶಿವಳ್ಳಿ ಭವನ ಉದ್ಘಾಟನೆ 24ರಂದು

ಸೀತಾಂಗೋಳಿ: ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ವಲಯ ಸಮಿತಿಗೆ ಸೀತಾಂಗೋಳಿಯಲ್ಲಿ ನಿರ್ಮಿಸಿದ ನೂತನ ಕಟ್ಟಡವನ್ನು 24ರಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯ ವರು ಉದ್ಘಾಟಿಸುವರು. ಇದರಂಗವಾಗಿ ಬೆಳಿಗ್ಗೆ ಮಹಾಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. 10ಕ್ಕೆ ನಡೆಯುವ ಸಭಾ ಕಾರ್ಯಕ್ರಮ ವನ್ನು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಉದ್ಘಾಟಿಸುವರು. ಕಟ್ಟಡ  ನಿರ್ಮಾಣ ಸಮಿತಿ ಅಧ್ಯಕ್ಷ ಚಕ್ರಪಾಣಿ ದೇವಪೂಜಿತ್ತಾಯ ಅಧ್ಯಕ್ಷತೆ ವಹಿಸುವರು. ಹಲವು ಗಣ್ಯರು ಉಪಸ್ಥಿತರಿರುವರು. ಈ ವೇಳೆ ಆರ್ಥಿಕವಾಗಿ ಹಿಂದುಳಿದವರಿಗೆ ರಾಧಾಕೃಷ್ಣ ರಾವ್ ಹಾಗೂ ಶಾಂತಕುಮಾರಿ ಮೆಮೋರಿಯಲ್ ಕುಟುಂಬ ಟ್ರಸ್ಟ್ ವತಿಯಿಂದ ಧನ ಸಹಾಯ ವಿತರಣೆ, ಶಿವಳ್ಳಿ ಬ್ರಾಹ್ಮಣ ಸಭಾ ಯುವಶಕ್ತಿ ಘಟಕದ ಅದೃಷ್ಟಚೀಟಿ  ಡ್ರಾ, ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

RELATED NEWS

You cannot copy contents of this page