ಸೀತಾಂಗೋಳಿ: ಥೋಮಸ್ ಕ್ರಾಸ್ತಾ ಕೊಲೆ ಪ್ರಕರಣ: ಪೆರಿಯಾ ಅವಳಿ ಕೊಲೆ ಪ್ರಕರಣದಲ್ಲಿ ಸಿಬಿಐ ಪರ ವಾದಿಸಿದ ಕೆ. ಪದ್ಮನಾಭರನ್ನು ಸ್ಪೆಷಲ್ ಪ್ರೋಸಿಕ್ಯೂಟರ್‌ರನ್ನಾಗಿ ನೇಮಕ
ಕಾಸರಗೋಡು: ಸೀತಾಂಗೋಳಿ ಸಮೀಪದ ಚೌಕಾರು ಪಿಲಿಪಳ್ಳದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಕೊಳವೆ ಬಾವಿ ನಿರ್ಮಾಣ ಗುತ್ತಿಗೆದಾರ ಥೋಮಸ್ ಕ್ರಾಸ್ತಾ (50)ರನ್ನು ಕೊಲೆಗೈದ ಪ್ರಕರಣದ ಪರ ವಾದಿಸಲು ಹೊಸದುರ್ಗ ಬಾರ್ ಅಸೋಸಿ ಯೇಶನ್‌ನ ಖ್ಯಾತ ನ್ಯಾಯವಾದಿ ಕೆ. ಪದ್ಮನಾಭರನ್ನು ರಾಜ್ಯ ಸರಕಾರ ನೇಮಿಸಿದೆ. ಇವರು ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ಸಿಬಿಐ ಪರವಾಗಿ ಪ್ರೋಸಿಕ್ಯೂಶನ್ ಅಸಿಸ್ಟೆಂಟ್ ಆಗಿ ಕೊಚ್ಚಿಯ ಸಿಬಿಐ ನ್ಯಾಯಾಲಯದಲ್ಲಿ ವಾದಿಸಿದ್ದರು. ೨೦೨೩ ಜೂನ್ ೨೮ರಂದು ಮನೆ ಹಿತ್ತಿಲ ಶೌಚಾಲಯ ಹೊಂಡದಲ್ಲಿ ಥೋಮಸ್ ಕ್ರಾಸ್ತಾರ ಮೃತದೇಹ ಪತ್ತೆಯಾಗಿತ್ತು. ಬದಿಯಡ್ಕ ಪೊಲೀಸರು ನಡೆಸಿದ ತನಿಖೆಯಲ್ಲಿ ಅದು ಕೊಲೆಯಾಗಿತ್ತೆಂಬುವುದು ಬಳಿಕ ಸಾಬೀತುಗೊಂಡಿತ್ತು. ಮೃತದೇಹ ಕುತ್ತಿಗೆಯಿಂದ ಸೊಂಟದ ತನಕ ಗೋಣಿ ಚೀಲ ಹಾಗೂ ಕರ್ಟನ್ ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿತ್ತು. ಮಾತ್ರವಲ್ಲ ಮೃತದೇಹದ ಹಲವೆಡೆ ಗಾಯಗಳ ಗುರುತುಗಳು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಪುತ್ತೂರು ನಿವಾಸಿಗಳು ಪಿಲಿಪಳ್ಳದಲ್ಲಿ ಥೋಮಸ್ ಕ್ರಾಸ್ತಾರ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಕೆ. ಮುನೀರ್ (42) ಮತ್ತು ಆತನ ಪತ್ನಿಯ ಸಹೋದರ ಚೌಕಾರಿನ ಅಶ್ರಫ್ (41) ಎಂಬವರನ್ನು ಪೊಲೀಸರು ಬಂಧಿಸಿ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಚಿನ್ನ ಹಾಗೂ ಹಣ ದರೋಡೆಗೈದ ಆರೋಪಿಗಳು ಕೊಲೆ ನಡೆಸಿದ್ದರೆಂಬು ವುದು ಬಳಿಕ ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿತ್ತು. ಥೋಮಸ್ ಕ್ರಾಸ್ತಾರ ಐದೂಮುಕ್ಕಾಲು ಪವನ್‌ನ ಚಿನ್ನದ ಒಡವೆ ಹಾಗೂ 20,000 ರೂ. ದರೋ ಡೆಗೈಯ್ಯಲಾಗಿತ್ತು. ಆ ಚಿನ್ನವನ್ನು ಚಿನ್ನ ದಂಗಡಿಯೊಂದಕ್ಕೆ ಮಾರಾಟ ಮಾಡಿ ದ್ದರು. ಅದನ್ನು ಚಿನ್ನದಂಗಡಿಯಿಂದ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದರು. ಅದು ಬದಿಯಡ್ಕ ಪೊಲೀಸ್ ಠಾಣೆ ಎಸ್‌ಐ ಆಗಿದ್ದ ಕೆ.ಪಿ. ವಿನೋದ್ ಕುಮಾರ್ ಈ ಕೊಲೆ ಪ್ರಕರಣದ ತನಿಖೆ ನಡೆಸಿದ್ದರು.