ಸುಲ್ತಾನ್ ಬತ್ತೇರಿಯಲ್ಲ ಅದು ಗಣಪತಿವಟ್ಟಂ-ಕೆ. ಸುರೇಂದ್ರನ್

ತಾಮರಶ್ಶೇರಿ: ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿಯ ನಿಜವಾದ ಹೆಸರು ಗಣಪತಿವಟ್ಟಂ ಆಗಿದೆಯೆಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ.

ಟಿಪ್ಪುಸುಲ್ತಾನ್ ಆಡಳಿತ ಕಾಲದ ಮೊದಲು ಸುಲ್ತಾನ್ ಬತ್ತೇರಿಯ ಹೆಸರು ಗಣಪತಿವಟ್ಟಂ ಎಂದಾಗಿತ್ತು. ಟಿಪ್ಪು ಸುಲ್ತಾನ್ ಇಲ್ಲಿಗೆ ಬರುವ ಮೊದಲೇ ಆ ಸ್ಥಳ ಅಲ್ಲಿತ್ತು. ೧೯೮೪ರಲ್ಲಿ ಬಿಜೆಪಿ ನೇತಾರ ಪ್ರಮೋದ್ ಮಹಾಜನ್ ಅವರೂ ಅಂದೇ  ಅದನ್ನು ಉಲ್ಲೇಖ ಮಾಡಿದ್ದರು.

 ಎರಡು ಶತಮಾನಗಳ ಹಿಂದೆ ಕೇರಳದ ಮಲಬಾರ್ ವಲಯ ಮೇಲೆ ಅತಿಕ್ರಮ ಮಾಡಿದ್ದ ಟಿಪ್ಪುಸುಲ್ತಾನ್ ಇದರ ಹೆಸರು ಬದಲಾವಣೆ ಮಾಡಿದ್ದ ಎನ್ನಲಾಗಿದೆ. ಇದರ ನಿಜವಾದ ಹೆಸರು ಗಣಪತಿವಟ್ಟಂ ಆಗಿದ್ದು, ಆದ್ದರಿಂದ ಇದರ ಹೆಸರು ಬದಲಾವಣೆ ಮಾಡು ವುದು ಅಗತ್ಯವಾಗಿದೆ. ಕೇರಳದಲ್ಲಿ ಇಂತಹ ಸ್ಥಳಕ್ಕೆ ಯಾರೋ ದಾಳಿಕೋ ರನ ಹೆಸರನ್ನು ಏಕೆ ಇಡಬೇಕು. ಆ ಪ್ರದೇಶಕ್ಕೆ ಟಿಪ್ಪುಸುಲ್ತಾನ್ ಹೊಸ ಹೆಸರು  ನೀಡಿದ್ದ ಮಲಬಾರ್ ಪ್ರದೇಶದ ಆಕ್ರಮಣದ ಸಮಯದಲ್ಲಿ ತನ್ನ ಯುದ್ಧ ಸಾಮಾಗ್ರಿಗಳನ್ನು ಟಿಪ್ಪುಸುಲ್ತಾನ್ ಇಲ್ಲಿ ಬಚ್ಚಿಟ್ಟಿದ್ದು, ಮಾತ್ರವಲ್ಲ ಇಲ್ಲಿ ಕೋಟೆಯನ್ನು ಕಟ್ಟಿದ್ದ. ಅದೀಗ ಪಾಳುಬಿದ್ದಿದೆ. ಅದಕ್ಕೆ ಅಂದು ಸುಲ್ತಾನ್‌ನ ಬ್ಯಾಟರಿ ಎನ್ನುವ ಹೆಸರು ಇರಿಸಲಾಗಿತ್ತು. ದಿನಕಳೆದಂತೆ ಅದು ಸುಲ್ತಾನ್ ಬತ್ತೇರಿಯಾಗಿ ಬದಲಾಯಿಸಿ ಈ ಪ್ರದೇಶದಲ್ಲಿ ಮೊದಲೇ ಗಣಪತಿ ಕ್ಷೇತ್ರ ನೆಲೆಗೊಂಡಿತ್ತು. ಆದ್ದರಿದಾಗಿ ಇದರ ಮೂಲ ಹೆಸರು ಗಣಪತಿವಟ್ಟಂ ಆಗಿದೆಯೆಂದೂ ಸುರೇಂದ್ರನ್ ಹೇಳಿದ್ದಾರೆ.  ವಯನಾಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಉಮೇದ್ವಾರರಾಗಿ ರುವ ಕೆ. ಸುರೇಂದ್ರನ್ ಚುನಾವಣೆ ವೇಳೆ ಪ್ರದೇಶದ ನಾಮಕರಣದ ಬಗ್ಗೆ ನೀಡಿರುವ ಹೇಳಿಕೆಯನ್ನು ಯುಡಿಎಫ್ ಮತ್ತು ಎಡರಂಗ ತರಾಟೆಗೆ ತೆಗೆದುಕೊಂಡು ಅದರ ಹೆಸರಲ್ಲಿ ಬಿಜೆಪಿ ವಿರುದ್ಧ ಹೊಹಾರ ತೊಡಗಿದೆ. ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಮತ್ತು ಸಿಪಿಐ ನೇತಾರೆ ಅನಿ ರಾಜ್ ಸ್ಪರ್ಧಿಸುವ  ಕ್ಷೇತ್ರ ಇದಾಗಿದೆ.

Leave a Reply

Your email address will not be published. Required fields are marked *

You cannot copy content of this page