ಸೂರಂಬೈಲು ಶಾಲೆಯಲ್ಲಿ ಶಿಕ್ಷಕ ದಿನಾಚರಣೆ
ಸೂರಂಬೈಲು: ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ ದಿನ ಆಚರಿಸಲಾಯಿತು. ಪಿಟಎ ಅಧ್ಯಕ್ಷ ಬಾಬು ಪಿ. ಉದ್ಘಾಟಿಸಿದರು. ಇದೇ ಶಾಲೆಯಲ್ಲಿ ಕಲಿತು ಬಳಿಕ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ನಿವೃತ್ತರಾದ ಗಿರಿಜಾನಾಥ ಕೆ. ಅವರನ್ನು ಗೌರವಿಸಲಾ ಯಿತು. ಕಿರಣ್ ಕೆ., ಗೀತಾ ಕೆ., ಪ್ರಸನ್ನ ಕುಮಾರಿ ಎ., ಸಾವಿತ್ರಿ ಬಿ., ಸೌದತ್ ಕೆ.ಪಿ. ಸ್ಮರಣಿಕೆ ನೀಡಿ ಸನ್ಮಾನಿಸಿದರು. ಲಾರೆಟ್ ಮುಹಮ್ಮದ್ ಮುನ್ಸೀರ್, ಸ್ಮಿತಾ ವಿ. ಮುಳಿಯಡ್ಕ ಶುಭಕೋರಿ ದರು. ಮುಖ್ಯ ಶಿಕ್ಷಕಿ ಸುನೀತ ಎ. ಸ್ವಾಗತಿಸಿ, ಗೀತಾ ಕೆ. ವಂದಿಸಿದರು.