ಸೈಬರ್ ವಂಚನೆ ತಡೆಗಟ್ಟಲು ಪೊಲೀಸರಿಗೆ ಎಐ ಟೂಲ್ ಕಿಟ್

ಕಾಸರಗೋಡು: ಕೃತಕತನ ಬುದ್ದಿ (ಆರ್ಟಿಫೀಶಿಯಲ್ ಇಂಟೆಲಿಜೆನ್ಸ್-ಎಐ) ಉಪಯೋಗಿಸಿ ನಡೆಸಲಾಗುವ ಸೈಬರ್ ವಂಚನೆ ಕೃತ್ಯಗಳನ್ನು ತಡೆಗಟ್ಟಲು ಪೊಲೀಸರಿಗೆ ಎಐ ಟೂಲ್ ಕಿಟ್ ನೀಡಲು ಸರಕಾರ ತೀರ್ಮಾನಿಸಿದೆ.

ಎಐ ವೀಡಿಯೋಗಳು ಅವುಗಳ ಚಿತ್ರಗಳು, ವಾಸ್ತವತೆ ಮತ್ತು ಅವುಗಳ ಮೂಲ ತಿಳಿದುಕೊಳ್ಳಲು ಸಾಧ್ಯವಾ ಗುವ  ರೀತಿಯ ಟೂಲ್ ಕಿಟ್ ಆಗಿದೆ ಇದು.  ಹೈದರಾಬಾದ್‌ನ ಸಿ-ಡೋಕ್ ಇಂತಹ ಟೂಲ್ ಕಿಟ್  ಅಭಿವೃದ್ಧಿಪಡಿಸಿದೆ. ಅದು ಶೀಘ್ರ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಬಂದು  ಸೇರಲಿದೆಯೆಂದು ರಾಜ್ಯ ಸೈಬರ್ ಆಪರೇಶನ್ ಎಸ್‌ಪಿ ಎಸ್. ಗೌರಿಶಂಕರ್ ತಿಳಿಸಿದ್ದಾರೆ.

ಬೇರೆ ವ್ಯಕ್ತಿಗಳ ಮುಖ ಮತ್ತು  ಶಿರವನ್ನು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್‌ನ ಸಹಾಯದೊಂದಿಗೆ ಸೃಷ್ಟಿಸಿ ಅದನ್ನು ಬಳಸಿ ಸೈಬರ್ ವಂಚನಾ ಜಾಲ ಜನರನ್ನು ವಂಚಿಸುತ್ತಿದೆ. ಇದಕ್ಕಾಗಿ ಡೀಪ್ ಫೇಕ್  ಟೆಕ್ನೋಲಜಿಯನ್ನು ಸೈಬರ್ ವಂಚಕರು ಬಳಸುತ್ತಾರೆ. ಇದನ್ನು ಬಳಸಿ ಯಾವುದೇ ವ್ಯಕ್ತಿಯ ತದ್ರೂಪಿ ವ್ಯಕ್ತಿಯನ್ನು ಸೃಷ್ಟಿಸಿ  ಅವರದ್ದೇ ಶಬ್ದವನ್ನು ನಕಲಿಯಾಗಿ ಬಳಸಿ ಆ ಮೂಲಕ ವಂಚನೆ ನಡೆಸುವ ಹಲವು ಸೈಬರ್ ವಂಚನಾ ಜಾಲದವರು ದೇಶದಾದ್ಯಂತವಾಗಿ ಕಾರ್ಯವೆ ಸಗುತ್ತಿರುವ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿದೆ. ಇಂತಹ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಬಳಸಿ ಬ್ಲೂಫಿಲ್ಮ್  ತಯಾರಿಸಿ ಹಣ ಎಗರಿಸುವ  ಹಲವು ತಂಡಗಳೂ ದೇಶದಲ್ಲಿ ಹಲವೆಡೆಗಳಲ್ಲಿ ಕಾರ್ಯವೆಸಗುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

Leave a Reply

Your email address will not be published. Required fields are marked *

You cannot copy content of this page