ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ
ಕಾಸರಗೋಡು: ಎಸ್ಎಸ್ ಎಲ್ಸಿ ಪರೀಕ್ಷೆ ಸೋಮವಾರದಿಂದ ಆರಂಭಗೊಳ್ಳಲಿದೆ. ಜಿಲ್ಲೆಯಲ್ಲಿ ಈಬಾರಿ ಒಟ್ಟು 20,581 ವಿದ್ಯಾರ್ಥಿ ಗಳು ಪರೀಕ್ಷೆಗೆ ಬರೆಯಲಿದ್ದಾರೆ.
ಜಿಲ್ಲೆಯ ಅತೀ ಹೆಚ್ಚುಎಂಬಂತೆ ಟಿಐಎಚ್ಎಸ್ಎಸ್ ನಾಯಮಾ ರಮೂಲೆ ಶಾಲೆಯಲ್ಲಿ 861 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲಿದ್ದಾರೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಕುಂಬಳೆ ಜಿಎಚ್ಎಸ್ ಎಸ್ನಲ್ಲಿ 643, ಹೊಸದುರ್ಗ ಎಚ್ಎಸ್ಎಸ್ನಲ್ಲಿ 522 ವಿದ್ಯಾ ರ್ಥಿಗಳು ಪರೀಕ್ಷೆಗೆ ಹಾಜರಾಗ ಲಿದ್ದಾರೆ. ಸರಕಾರಿ ಶಾಲೆಗಳ ಪೈಕಿ ಅತಿ ಕಡಿಮೆ ಎಂಬಂತೆ ಮೂಡಂಬೈಲು ಜಿಎಚ್ಎಸ್ನಲ್ಲಿ 12 ವಿದ್ಯಾರ್ಥಿಗಳು ಮಾತ್ರವೇ ಪರೀಕ್ಷೆಗೆ ಬರೆಯಲಿದ್ದಾರೆ.
ಈ ಪರೀಕ್ಷೆ ಬರೆಯುವವರಲ್ಲಿ ಅತೀ ಹೆಚ್ಚು ಎಂಬAತೆ 10,869 ಗಂಡು ಮಕ್ಕಳು ಹಾಗೂ 9,712 ಹೆಣ್ಮಕ್ಕಳು ಒಳಗೊಂಡಿದ್ದಾರೆ.
ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ 6139 ಗಂಡು ಹಾಗೂ 5360 ಹೆಣ್ಮಕ್ಕಳು ಪರೀಕ್ಷೆಗೆ ಬರೆಯಲಿದ್ದಾರೆ. ಹೊಸದುರ್ಗ ಶಿಕ್ಷಣ ಜಿಲ್ಲೆಯಲ್ಲಿ 4,730 ಗಂಡು ಹಾಗೂ 4,352 ಹೆಣ್ಮಕ್ಕಳು ಪರೀಕ್ಷೆಗೆ ಬರೆಯಲಿದ್ದಾರೆ.