ಸೋಮವಾರದ ತನಕ ಪಾಸ್ಪೋರ್ಟ್ ಸೇವೆ ಸ್ಥಗಿತ
ಕಾಸರಗೋಡು: ತಾಂತ್ರಿಕ ದುರಸ್ತಿ ಕೆಲಸಗಳನ್ನು ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಪ್ರಧಾನ ಅಂಚೆಕಚೇರಿ ಕಟ್ಟಡದಲ್ಲಿ ಕಾರ್ಯವೆಸಗುತ್ತಿರುವ ಪಾಸ್ಪೋರ್ಟ್ ಸೇವಾ ಕೇಂದ್ರಗಳ ಸೇವೆಯನ್ನು ಸೋಮವಾರ (ಸೆ.2ರ) ತನಕ ಸ್ಥಗಿತಗೊಳಿಸಲಾಗಿದೆ.
ಇದರ ಹೊರತಾಗಿ ಕಲ್ಲಿ ಕೋಟೆಯಲ್ಲಿರುವ ರೀಜಿನಲ್ ಪಾಸ್ಪೋರ್ಟ್ ಕಚೇರಿ, ವೆಸ್ಟ್ ಹಿಲ್ ವಡಗರೆ, ಮಲಪ್ಪುರಂ, ಕಣ್ಣೂರು ಮತ್ತು ಪಯ್ಯನ್ನೂರು ಪಾಸ್ಪೋರ್ಟ್ ಸೇವಾ ಕೇಂದ್ರ ಗಳಲ್ಲೂ ಸೋಮವಾರ ತನಕ ಸೇವೆಯನ್ನು ನಿಲುಗಡೆಗೊಳಿಸಲಾಗಿದೆ.