ಸ್ಕೂಟರ್‌ಗಳು ಢಿಕ್ಕಿ ಹೊಡೆದು ಸವಾರ ಮೃತ್ಯು

ಕಾಸರಗೋಡು: ಸ್ಕೂಟರ್‌ಗಳು ಪರಸ್ಪರ ಢಿಕ್ಕಿ ಹೊಡೆದು ಓರ್ವ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಕೋಟಿಕುಳಂ ಕಣ್ಣಂಕುಳಂ ಮಲಾಕುನ್ನು ನಿವಾಸಿ ಕೆ. ಅಬ್ದುಲ್ ರಹಿಮಾನ್ (60) ಸಾವನ್ನಪ್ಪಿದ ವ್ಯಕ್ತಿ. ಉದುಮ ಪಾಕಾರ ಬದರಿಯಾ ದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಅಬ್ದುಲ್ ರಹಿಮಾನ್‌ರವರು ಶನಿವಾರದಂದು ರಾತ್ರಿ ಸ್ಕೂಟರ್‌ನಲ್ಲಿ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಪಾಲಕುನ್ನು, ಆರಾಟುಕಡವು ರಸ್ತೆಯ ಅರಯಿಲ್‌ಪರದ ಬಳಿ ಅವರ ಸ್ಕೂಟರ್‌ಗೆ ಇನ್ನೊಂದು ಸ್ಕೂಟರ್ ಢಿಕ್ಕಿ ಹೊಡೆದಿದೆ. ಅದರಿಂದ ಗಂಭೀರ ಗಾಯಗೊಂಡ ಅಬ್ದುಲ್ ರಹಮಾನ್‌ರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕೆ. ಮುಹಮ್ಮದ್ ಹಾಜಿ- ಬೀಫಾತುಮ್ಮಾ ದಂಪತಿ ಪುತ್ರನಾಗಿರುವ ಅಬ್ದುಲ್ ರಹಮಾನ್‌ರವರು ಪತ್ನಿ ಖೈರುನ್ನೀಸಾ, ಮಕ್ಕಳಾದ ಸಫ್ವಾನಾ ಅಭೀಶ್ ಶಾ, ಸನ ಫಾತಿಮಾ, ಅಳಿಯ ಯೂಸಫ್, ಸಹೋದರ- ಸಹೋದರಿಯರಾದ ಅಸೀಸ್, ಅಬ್ದುಲ್ಲ, ಖದೀಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಬೇಕಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.

RELATED NEWS

You cannot copy contents of this page