ಕುಂಬಳೆ: ಅಧ್ಯಾಪಿಕೆ ಹಾಗೂ ಮಗಳು ಸಂಚರಿಸುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿ ಯಾದ ಕಾರಿನ ಪತ್ತೆಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.
ಮೊನ್ನೆ ಸಂಜೆ ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಭಾಸ್ಕರನಗರದಲ್ಲಿ ಅಪಘಾತವುಂ ಟಾಗಿತ್ತು. ಭಾಸ್ಕರ ನಗರದ ಸಂತೋಷ್‌ರ ಪತ್ನಿಯೂ ಕುಂಬಳ ಸರಕಾರಿ ಸೀನಿಯರ್ ಬೇಸಿಕ್ ಶಾಲೆಯ ಅಧ್ಯಾಪಿಕೆಯಾದ ಕನಕಲಕ್ಷ್ಮಿ (45), ಮಗಳು ಸಾಹಿತ್ಯ (14) ಎಂಬಿವರು ಅಪಘಾತದಲ್ಲಿ ಗಾಯಗೊಂಡಿದ್ದರು. ಇವರನ್ನು ಕುಂಬಳೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮೊನ್ನೆ ಸಂಜೆ ಶಾಲೆಬಿಟ್ಟು ಮನೆಗೆ ತೆರಳುತ್ತಿದ್ದಾಗ ಅಪಘಾತವುಂಟಾಗಿದೆ. ಓವರ್‌ಟೇಕ್ ಮಾಡಿ ಬಂದ ಕಾರೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದಿತ್ತು. ಇದರಿಂದ ರಸ್ತೆಗೆ ಬಿದ್ದ ತಾಯಿ ಹಾಗೂ ಮಗಳನ್ನು ನಾಗರಿಕರು ಆಸ್ಪತ್ರೆಗೆ ತಲುಪಿಸಿದ್ದಾರೆ. ಅಧ್ಯಾಪಿಕೆಯ ಬೆನ್ನೆಲುಬು ಹಾಗೂ ಮುಖಕ್ಕೆ ಗಾಯಗಳಾಗಿವೆ. ಒಂದು ಹಲ್ಲು ಉದುರಿದೆ. ಮಗಳೂ ಗಾಯಗೊಂಡಿ ದ್ದಾಳೆ. ಘಟನೆ ಬಗ್ಗೆ ಕೇಸು ದಾಖಲಿಸಿಕೊಂಡ ಕುಂಬಳೆ ಪೊಲೀಸರು ಢಿಕ್ಕಿ ಹೊಡೆದ ಕಾರಿನ ಪತ್ತೆಗಾಗಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಗ್ರೇ ಕಲರ್‌ನ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದು ಪರಾರಿ ಯಾಗಿರುವುದಾಗಿ ತಿಳಿದುಬಂದಿದೆ.