ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಮದ್ಯ ವಶ: ವ್ಯಕ್ತಿ ಪರಾರಿ
ಉಪ್ಪಳ: ಸ್ಕೂಟರ್‌ನಲ್ಲಿ ಸಾಗಿ ಸುತ್ತಿದ್ದ 0.8 ಲೀಟರ್ ಕರ್ನಾಟಕ ಮದ್ಯವನ್ನು ಮಂಜೇಶ್ವರ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂ ಡಿದ್ದಾರೆ. ಇದೇ ವೇಳೆ ಅಧಿಕಾರಿಗಳ ಕಾ ರ್ಯಾಚರಣೆ ವೇಳೆ ಸ್ಕೂಟರ್ ನಲ್ಲಿದ್ದ ವ್ಯಕ್ತಿ ಸ್ಕೂಟರ್ ಹಾಗೂ ಮದ್ಯ ಉಪೇಕ್ಷಿಸಿ ಪರಾರಿಯಾಗಿದ್ದಾನೆ.
ನಿನ್ನೆ ರಾತ್ರಿ ೧೦.೧೫ ಮಂಜೇಶ್ವರ ಅಬಕಾರಿ ಕಚೇರಿ ಸಮೀಪ ಅಧಿಕಾ ರಿಗಳು ವಾಹನ ತಪಾಸಣೆ ನಡೆಸು ತ್ತಿದ್ದಾಗ ಆಗಮಿಸಿದ ಸ್ಕೂಟರ್ ನಿಲ್ಲಿಸದೆ ಪರಾರಿಯಾಗಿತ್ತು. ಅದನ್ನು ಅಧಾರಿಗಳು ಬೆನ್ನಟ್ಟಿ ಹಿಡಿಯ ಲೆತ್ನಿಸಿದಾಗ ವ್ಯಕ್ತಿ ಸ್ಕೂಟರ್ ನಿಲ್ಲಿಸಿ ಓಡಿ ಪರಾರಿಯಾಗಿದ್ದಾನೆ. ಸ್ಕೂಟರ್ ಹಾಗೂ ಮದ್ಯವನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಬಕಾರಿ ಇನ್‌ಸ್ಪೆಕ್ಟರ್ ಗಂಗಾಧರನ್ ಕೆ.ಪಿ, ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಗ್ರೇಡ್ ಗೋಪಿ ಕೆ, ಪ್ರಿವೆಂಟೀವ್ ಆಫೀಸರ್ ಗ್ರೇಡ್ ಎಂ.ಎಂ. ಪ್ರಸಾದ್, ಸಿಇಒಗಳಾದ ಪ್ರಸನ್ನ ಕುಮಾರ್, ವಿ. ಮೋಹನ್ ಕುಮಾರ್, ಎಲ್‌ಪಿವಿ ಜಿತಿನ್, ಚಾಲಕ ರಾಧಾಕೃಷ್ಣನ್ ಎಂ. ಕೆ ಮೊದಲಾದವರು ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.