ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 17.28 ಲೀಟರ್ ಮದ್ಯ ವಶ: ಇಬ್ಬರ ಸೆರೆ
ಉಪ್ಪಳ: ಕರ್ನಾಟಕ ಭಾಗದಿಂದ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 17.28 ಲೀಟರ್ ಕರ್ನಾಟಕ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ. ಇದೇ ವೇಳೆ ಸ್ಕೂಟರ್ ನಲ್ಲಿದ್ದ ಇಬ್ಬರು ಓಡಿ ಪರಾರಿಯಾಗಿ ದ್ದಾರೆ. ನಿನ್ನೆ ರಾತ್ರಿ 11 ಗಂಟೆಗೆ ಮಂಜೇ ಶ್ವರ ಅಬಕಾರಿ ಚೆಕ್ ಪೋಸ್ಟ್‌ನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅಬಕಾರಿ ಅಧಿಕಾರಿಗಳನ್ನು ಕಂಡ ಮದ್ಯ ಸಾಗಾಟಗಾರರು ಸ್ಕೂಟರ್ ನಿಲ್ಲಿಸದೆ ಉಪ್ಪಳ ಭಾಗಕ್ಕೆ ಪರಾರಿಯಾ ಗಿದ್ದರು. ಅಧಿಕಾರಿಗಳು ಅವರನ್ನು ಬೆನ್ನಟ್ಟಿದಾಗ ವಾಹನ ಹಾಗೂ ಮದ್ಯವನ್ನು ಉಪೇಕ್ಷಿಸಿ ಇಬ್ಬರು ಪರಾರಿ ಯಾಗಿ ದ್ದಾರೆ. ಅಬಕಾರಿ ಇನ್‌ಸ್ಪೆಕ್ಟರ್ ಗಂಗಾಧರನ್ ಕೆ.ಪಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.