ಸ್ಕೂಟರ್ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಕ್ವಾರ್ಟರ್ಸ್ ಬಳಿ ನಿಲ್ಲಿಸಲಾಗಿದ್ದ ಸ್ಕೂಟರ್ ಬೆಂಕಿಗಾಹುತಿ ಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿದ್ಯಾನಗರಕ್ಕೆ ಸಮೀಪದ ಪನ್ನಿಪ್ಪಾರೆಯ ಕ್ವಾರ್ಟರ್ಸ್ ಒಂದರಲ್ಲಿ ವಾಸಿಸುತ್ತಿರುವ ಪಿ.ಎಂ. ಅಬ್ದುಲ್ ಮನಾಫ್ (39) ಎಂಬವರ ಸ್ಕೂಟರ್ ನಿನ್ನೆ ಮುಂಜಾನೆ ಅವರ ಕ್ವಾರ್ಟರ್ಸ್ ಬಳಿಯಲ್ಲೇ ಬೆಂಕಿ ಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾ ಗಿದೆ. ಇದರಿಂದ 50,000 ರೂ. ನಷ್ಟ ಲೆಕ್ಕಹಾಕಲಾಗಿದೆ ಎಂದು ಆ ಬಗ್ಗೆ ಮನಾಫ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸಾಲದ ಹಣ ನೀಡುವ ವಿಷಯದಲ್ಲಿ ಓರ್ವ ತನಗೆ ಬೆದರಿಕೆ ಒಡ್ಡಿದ್ದನೆಂದೂ ದೂರಿನಲ್ಲಿ ಮನಾಫ್ ಆರೋಪಿಸಿದ್ದಾರೆ. ಆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.