ಸ್ಥಳದ ಮಾಲಕರ ಅನುಮತಿಯಿಲ್ಲದೆ ರಸ್ತೆ ನಿರ್ಮಿಸಿ ಹೊಯ್ಗೆ ಸಾಗಾಟ: ಇಬ್ಬರ ವಿರುದ್ಧ ಕೇಸು

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಾಗಿಸಲು ಸ್ಥಳದ ಮಾಲಕರ ಅನುಮತಿಯಿಲ್ಲದೆ ರಸ್ತೆ ನಿರ್ಮಿಸಿದ ಆರೋಪದಂತೆ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವೀರನಗರ ಅಜಯ್ ಹಾಗೂ ವಳಯಂನ ಹಂಸ ಎಂಬಿವರ ವಿರುದ್ಧ ಕೇಸು ದಾಖ ಲಿಸಲಾಗಿದೆ.

ವೀರನಗರದ ಇಬ್ರಾಹಿಂ ಕೋಟ ಹಾಗೂ ವಳಯಂನ ಅಬ್ದುಲ್ ರಹಿ ಮಾನ್ ಎಂಬಿವರು ನೀಡಿದ ದೂರಿನಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇಬ್ರಾಹಿಂ ಕೋಟ ಹಾಗೂ ಅಬ್ದುಲ್  ರಹಿಮಾನ್‌ರಿಗೆ ತಿಳಿಯದೆ ಅವರ ಹಿತ್ತಿಲಿನ ಮೂಲಕ ರಸ್ತೆ ನಿರ್ಮಿಸಿ ಹೊಯ್ಗೆ ಸಾಗಾಟ ನಡೆಸುತ್ತಿರುವುದಾಗಿ ದೂರಲಾಗಿದೆ. ಅನಧಿಕೃತವಾಗಿ ಹೊಳೆಯಿಂದ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವುದನ್ನು ತಡೆಯಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವಾಗಲೇ  ಹೊಯ್ಗೆ ಸಾಗಾಟಕ್ಕಾಗಿ ರಸ್ತೆ ನಿರ್ಮಿಸಿದ ಬಗ್ಗೆ ದೂರು ಲಭಿಸಿದೆ.

You cannot copy contents of this page