ಸ್ಥಳೀಯಾಡಳಿತ ಸಂಸ್ಥೆಗಳಿಗೆ 1377.06 ಕೋಟಿ ರೂ. ಬಿಡುಗಡೆ
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ರಸ್ತೆ ಹಾಗೂ ಈ ರಸ್ತೇತರ ಸಂರಕ್ಷಣೆ ನಿಧಿಯಿಂದ ರಾಜ್ಯ ಸರಕಾರ 1377.06 ಕೋಟಿ ರೂ. ಬಿಡುಗಡೆಗೊಳಿಸಿದೆ.
ರಾಜ್ಯದ 1200ರಷ್ಟು ಸ್ಥಳೀಯಾ ಡಳಿತ ಸಂಸ್ಥೆಗಳಿಗೆ ಇದರ ಪ್ರಯೋಜನ ಲಭಿಸಲಿದೆ. ಇದರಂತೆ ರಾಜ್ಯದ 14 ಜಿಲ್ಲಾ ಪಂಚಾಯತ್‌ಗಳು, 152 ಬ್ಲೋಕ್ ಪಂಚಾಯತ್‌ಗಳು, 941 ಗ್ರಾಮ ಪಂಚಾಯತ್‌ಗಳು, 87 ನಗರಸ ಭೆಗಳು ಹಾಗೂ ಆರು ಮಹಾನಗರ ಪಾಲಿಕೆಗಳಿಗೆ ಈ ಹಣ ಲಭಿಸಲಿದೆ.
ಹೀಗೆ ಮಂಜೂರು ಮಾಡಲಾದ ಮೊತ್ತದಲ್ಲಿ ರಸ್ತೆ ಅಭಿವೃದ್ಧಿಗಾಗಿ 847.42 ಕೋಟಿ ರೂ., ರಸ್ತೇತರ ಅಭಿವೃದ್ಧಿಗಾಗಿ 529.63 ಕೋಟಿ ರೂ. ಒಳಗೊಂಡಿದೆ. ಇದರ ಹೊರತಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಸಾರ್ವಜನಿಕ ಅಗತ್ಯಗಳಿಗಾಗಿ ಪ್ರತೀ ತಿಂಗಳ ಪಾಲು ವತಿಯಿಂದ 210.51 ಕೋಟಿ ರೂ.ವನ್ನೂ ಮಂಜೂರು ಮಾಡಲಾಗಿದೆ. ಇದರಲ್ಲಿ ಸ್ಥಳೀಯಾಡಳಿತ ಇಂಜಿನಿಯರಿಂಗ್ ವಿಭಾಗದ ವೇತನ ವತಿಯಲ್ಲಿ 10.37 ಕೋಟಿ ರೂ.ಗಳಷ್ಟು ಕಡಿತ ಹೇರಲಾಗಿದೆ.