ಸ್ಥಳೀಯಾಡಳಿತ ಸಂಸ್ಥೆಗಳ ನಿರ್ಮಾಣ ಕೆಲಸಗಳ ಗುಣಮಟ್ಟ ಖಾತರಿ ಪಡಿಸಲು ಕ್ವಾಲಿಟಿ ಮೋನಿಟರಿಂಗ್ ಲ್ಯಾಬ್
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳು ನಡೆಸುತ್ತಿರುವ ನಿರ್ಮಾಣ ಕೆಲಸಗಳ ಗುಣಮಟ್ಟ ಖಾತರಿಪಡಿಸಲು ಕ್ವಾಲಿಟಿ ಮೋನಿಟರಿಂಗ್ ಲ್ಯಾಬ್ಗಳನ್ನು ಸ್ಥಾಪಿಸಲು ರಾಜ್ಯ ಸ್ಥಳೀಯಾಡಳಿತ ಖಾತೆ ಇಲಾಖೆ ತೀರ್ಮಾನಿಸಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ಓವರ್ಸಿಯರ್ಗಳ ನೇಮಕಾತಿಯನ್ನು ಜಿಲ್ಲಾ ಮಟ್ಟದ ಆಧಾರದಲ್ಲಿ ನಡೆಸುವ ತೀರ್ಮಾನವನ್ನೂ ಇಲಾಖೆ ಕೈಗೊಂಡಿದೆ. ಯಾವುದೇ ನಿರ್ಮಾಣ ಕೆಲಸಗಳ ಮತ್ತು ಸೇವೆಗಳನ್ನು ನಿಗದಿತ ಸಮಯ ವ್ಯಾಪ್ತಿಯೊಳಗೆ ಮಾಡಿ ಮುಗಿಸಬೇಕು. ಅದನ್ನು ಸದಾ ಖಾತರಿಪಡಿಸಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ತಡೆಗಟ್ಟುವ ಅಗತ್ಯದ ಕ್ರಮ ಕೈಗೊಳ್ಳಲಾಗುವುದು. ಭ್ರಷ್ಟಾಚಾರದ ಬಗ್ಗೆ ಜನರಿಗೆ ದೂರುಗಳಿದ್ದಲ್ಲಿ ಅದನ್ನು ಸ್ಥಳೀಯಾಡಳಿತ ಸಂಸ್ಥೆಯ ಪ್ರಿನ್ಸಿಪಲ್ ನಿರ್ದೇಶನಾಲಯಕ್ಕೆ ತಕ್ಷಣ ನೀಡಲು ಕಾಲ್ ಸೆಂಟರ್ಗಳು, ವಾಟ್ಸಪ್ ಸೌಕರ್ಯವನ್ನು ಏರ್ಪಡಿಸಲಾಗುವುದು. ದೂರುಗಳನ್ನು ಪರಿಶೀಲಿಸಿ ತ್ವರಿತ ತೀರ್ಮಾನ ಕೈಗೊಳ್ಳುವ ಕ್ರಮವನ್ನು ಕೈಗೊಳ್ಳಲಾಗುವುದು.