ಸ್ನೇಹಾಲಯದ ನಿವಾಸಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಪಾವೂರು ಸ್ನೇಹಾಲಯದಲ್ಲಿನ ನಿವಾಸಿಯಾಗಿದ್ದ ಜೋಸೆಫ್ ಪೆರಾರ (63) ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ನೇಹಾಲಯದ ತಾರಸಿಯ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಇವರನ್ನು ಆಸ್ಪತ್ರೆಗೆ ಕೊಂಡುಹೋದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. 2022ರಲ್ಲಿ ಮಂಗಳೂರಿನಲ್ಲಿ ಅಲೆದಾಡು ತ್ತಿದ್ದ ಇವರನ್ನು ಸ್ನೇಹಾಲಯಕ್ಕೆ ತಂದು ಸೇರಿಸಲಾಗಿತ್ತು. ನಿನ್ನೆ ಬೆಳಿಗ್ಗೆ ಇವರು ಆತ್ಮಹತ್ಯೆಗೈದಿದ್ದು, ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

You cannot copy contents of this page