ಸ್ವಾಮೀಜಿ ಕಾರಿಗೆ ಹಾನಿ: ಖಂಡನೆ

ಎಡನೀರು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಕಾರು ತಡೆದು ಆಕ್ರಮಿಸಿದ ಘಟನೆಯನ್ನು ಎಡನೀರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಖಂಡಿಸಿದೆ. ಗಣೇಶೋತ್ಸವ ಸಮಿತಿ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ, ಕಾರ್ಯದರ್ಶಿ ಧನ್‌ರಾಜ್ ಎಡನೀರು ಮಾತನಾಡಿ, ದೇವಸ್ಥಾನಗಳ ರಕ್ಷಣೆ, ಸ್ವಾಮೀಜಿಗಳ ಸಂರಕ್ಷಣೆಗೆ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.  ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು.

ಬದಿಯಡ್ಕ: ಎಡನೀರು ಸ್ವಾಮೀಜಿಯವರ ಕಾರಿಗೆ ದುಷ್ಕರ್ಮಿಗಳು ಹಾನಿ ಗೊಳಿಸಿದ ಪ್ರಕರಣವನ್ನು ಬಿಜೆಪಿ ಬದಿಯಡ್ಕ ಮಂಡಲ ಸಮಿತಿ ಖಂಡಿಸಿದೆ. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಮಿತಿ ಆಗ್ರಹಿಸಿದೆ.

You cannot copy contents of this page