ಹಗಲು ಗುಜರಿ ಹೆಕ್ಕುವಿಕೆ, ರಾತ್ರಿ ಕಳವು :17 ವರ್ಷದ ಬಳಿಕ ಸೆರೆಗೀಡಾದ ಆರೋಪಿ

ಕಾಸರಗೋಡು: ಹಗಲು ಗುಜರಿ ಸಾಮಗ್ರಿಗಳನ್ನು ಹೆಕ್ಕಿ ರಾತ್ರಿ ವೇಳೆ ಕಳ್ಳತನ ನಡೆಸಿದ ಪ್ರಕರಣದ ಆರೋಪಿಯನ್ನು ೧೭ ವರ್ಷದ ಬಳಿಕ ತಳಿಪರಂಬ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ತೋಟಡ ಸಮಾಜವಾದಿ ಕಾಲನಿ ಎ. ಉಮೇಶ್ (೪೨) ಬಂಧಿತ ಆರೋಪಿ. ೨೦೦೭ರಲ್ಲಿ  ತಳಿಪರಂಬ ಚಿನ್ನದಂಗಡಿಯೊಂದರಿಂದ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಈತ ಆರೋಪಿಯಾಗಿದ್ದು, ಕಳೆದ ೭ ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಕೊನೆಗೂ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾ ಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇತರ ಮೂವರು ಆರೋಪಿಗಳನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು.

You cannot copy contents of this page