ಹಗಲು ಜವುಳಿ ಅಂಗಡಿಯಲ್ಲಿ ಕೆಲಸ, ರಾತ್ರಿಕಳವು ದಂಧೆ: ಯುವಕ ಸೆರೆ
ಕಾಸರಗೋಡು: ಹಗಲು ವೇಳೆ ಜವುಳಿ ಅಂಗಡಿಯಲ್ಲಿ ದುಡಿದು ರಾತ್ರಿ ವೇಳೆ ಕಳವು ದಂಧೆಯಲ್ಲಿ ತೊಡಗಿಕೊಂಡಿರುವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ವಯನಾಡು ಅಂಬಲವಯಲ್ ವಿಕಾಸ್ ಕಾಲಿಚಲ್ ಅಬ್ದುಲ್ಲ ಆಬೀದ್ (26) ಎಂಬಾತ ಬಂಧಿತ ಆರೋಪಿ. ಹೊಸದುರ್ಗ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ.
ಹೊಸದುರ್ಗ ಸೆಕ್ಯುರಿಟಿ ಸಿಬ್ಬಂದಿಯೋರ್ವರ ಹಾಗೂ ವಲಸೆ ಕಾರ್ಮಿಕನೋರ್ವನ ಮೊಬೈಲ್ ಫೋನ್ಗಳನ್ನು ಕಳವುಗೈದ ಹಾಗೂ ಇತರ ಹಲವು ಕಳವು ಪ್ರಕರಣಗಳಲ್ಲಿ ಬಂಧಿತನು ಆರೋಪಿಯಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದರ ಹೊರತಾಗಿ ಹೊಸದುರ್ಗ ಟಿ.ಬಿ.ರಸ್ತೆ ಬಳಿಯ ಕೋಟಚ್ಚೇರಿಯ ಮನೆಗಳಿಗೆ ನುಗ್ಗಿ ಈತ ಕಳವು ನಡೆಸಿದ್ದನು. ಕದ್ದ ಮಾಲುಗಳನ್ನು ತಿರುವನಂತಪುರ ಮತ್ತಿತರೆಡೆಗಳಲ್ಲಿ ಈತ ಮಾರಾಟ ಮಾಡಿದ್ದನೆಂದು ತನಿಖೆಯಿಂದ ಬಯಲುಗೊಂಡಿದೆ. ಹಲವೆಡೆಗಳ ಸಿಸಿ ಟಿವಿ ದೃಶ್ಯಗಳಿಂದ ಆರೋಪಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿದೆ. ಆರೋಪಿ ಹಗಲು ವೇಳೆ ಹೊಸದುರ್ಗದ ಜವುಳಿ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದು, ರಾತ್ರಿ ವೇಳ ಕಳ್ಳತನ ನಡೆಸುವುದನ್ನು ತನ್ನ ಇನ್ನೊಂದು ವೃತ್ತಿಯನ್ನಾಗಿ ಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ವಯನಾಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಎಂಟರಷ್ಟು ಕಳವು ಪ್ರಕರ ಣಗಳು ದಾಖಲುಗೊಂಡಿವೆಯೆಂದು ಪೊಲೀಸರು ತಿಳಿಸಿದ್ದಾರೆ.