ಹಣಕಾಸು ಆಯೋಗದ ಜಿಲ್ಲಾ ಸಂದರ್ಶನ 10ರಂದು
ಕಾಸರಗೋಡು: ಹಣಕಾಸು ಆಯೋಗ ಈ ತಿಂಗಳ 10ರಂದು ಜಿಲ್ಲೆಗೆ ಭೇಟಿ ನೀಡಲಿದೆ. ಅಂದು ಅಪರಾಹ್ನ 2 ಗಂಟೆಗೆ ಸ್ಥಳೀಯಾಡಳಿತ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳೊಂದಿಗೆ ಆಯೋಗ ಮಾತುಕತೆ ನಡೆಸಲಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಯೋಜನೆಯಲ್ಲಿ ಅತ್ಯುತ್ತಮ ಸೇವೆಗಾಗಿ ರಾಜ್ಯ ಮಟ್ಟದ ಪ್ರಶಸ್ತಿಗೆ ಅರ್ಹರಾದ ಜಿಲ್ಲಾಧಿಕಾರಿ ಹಾಗೂ ಅವರ ಜೊತೆಗೆ ಕಾರ್ಯನಿರ್ವಹಿಸಿ ದವರನ್ನು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಅಭಿನಂದಿಸಿದರು. ಜಿಲ್ಲೆಯ 47 ಅಂಗನವಾಡಿಗಳಿಗೆ ಸ್ಥಳ ಕಂಡುಕೊಳ್ಳಲು ಇದುವರೆಗೆ ಸಾಧ್ಯವಾಗಿಲ್ಲವೆಂದು ಸರಕಾರಿ ಭೂಮಿ ಲಭ್ಯವಿಲ್ಲದಿರುವುದೇ ಇದಕ್ಕೆ ಕಾರಣವೆಂದು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ತಿಳಿಸಿದ್ದಾರೆ. ಈ ಸಂದಿಗ್ಧತೆಯನ್ನು ಪರಿಹರಿಸಲು ಖಾಸಗಿ ಭೂಮಿಯನ್ನು ಕಂಡುಕೊಂಡು ಪ್ರೊಜೆಕ್ಟ್ ಸಿದ್ಧಪಡಿಸುವುದಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳಿಗೆ, ಕಾರ್ಯದರ್ಶಿಗಳಿಗೆ ನಿರ್ದೇಶಿಸಿರುವುದಾಗಿ ಅವರು ತಿಳಿಸಿದರು. ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸುವುದರೊಂದಿಗೆ ಜಿಲ್ಲೆಗೆ ಅದು ಒಂದು ಹೆಗ್ಗುರುತಾಗಿ ಬದಲಾಗಲಿದೆ.
ಜಿಲ್ಲಾ ಆಯೋಜನ ಸಮಿತಿ ಸಭೆಯಲ್ಲಿ 48 ಸ್ಥಳೀಯಾಡಳಿತ ಸಂಸ್ಥೆಗಳ ಯೋಜನೆಗಳಿಗೆ ತಿದ್ದುಪಡಿ ಸಮರ್ಪಿಸಲಾಗಿದೆ. ಇದರಲ್ಲಿ 46 ಸ್ಥಳೀಯಾಡಳಿತ ಸಂಸ್ಥೆಗಳ ಯೋಜನೆ ತಿದ್ದುಪಡಿಗಳು ಅಂಗೀಕರಿಸಲ್ಪಟ್ಟಿವೆ. ಎರಡು ಸ್ಥಳೀಯಾಡಳಿತ ಸಂಸ್ಥೆಗಳ ಯೋಜನೆ ಪರಿಶೀಲಿಸಿದ ಬಳಿಕ ಅಂಗೀಕರಿಸುವುದಾಗಿ ಯೋಜನಾ ಸಮಿತಿ ತಿಳಿಸಿದೆ.