ಹಣಕಾಸು ಸಂಸ್ಥೆಯಲ್ಲಿ ನಕಲಿ ಚಿನ್ನ ಅಡವಿರಿಸಿ 13.45 ಲಕ್ಷ ರೂ. ವಂಚನೆ: ಇಬ್ಬರು ಸಿಬ್ಬಂದಿಗಳ ಸಹಿತ ಮೂವರ ವಿರುದ್ಧ ಕೇಸು

ಕುಂಬಳೆ:  ಖಾಸಗಿ ಹಣಕಾಸು ಸಂಸ್ಥೆಯಲ್ಲಿ  ನಕಲಿ ಚಿನ್ನಾಭರಣ ಅಡವಿರಿಸಿ 13.45 ಲಕ್ಷ ರೂ. ವಂಚಿಸಿದ ಬಗ್ಗೆ ದೂರಲಾಗಿದೆ. ಇದರಂತೆ   ಸಂಸ್ಥೆಯ ಇಬ್ಬರು ಸಿಬ್ಬಂದಿಗಳ ಸಹಿತ ಮೂವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕುಂಬಳೆಯಲ್ಲಿ ಕಾರ್ಯಾಚರಿ ಸುವ ಮುತ್ತೂಟ್  ಫಿನ್ ಕೋರ್ಪ್ ಎಂಬ ಖಾಸಗಿ ಹಣ ಕಾಸು ಸಂಸ್ಥೆಯ ಏರಿಯಾ ಮೆನೇಜರ್ ಶ್ರೀನಾಥ್ ಎನ್ ನೀಡಿದ ದೂರಿನಂತೆ ಕೊಯಿಪ್ಪಾಡಿ ಕಡಪ್ಪುರದ ನಿಸಾಮುದ್ದೀನ್ ಎಂ (31), ಸಂಸ್ಥೆಯ ಸಿಬ್ಬಂದಿಗಳಾದ ಆಶಾಲತಾ, ವೈಷ್ಣವಿ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಕಳೆದ ಆಗೋಸ್ತ್ 21 ಹಾಗೂ 22ರ ಮಧ್ಯೆ ಈ ವಂಚನೆ ನಡೆದಿದೆಯೆನ್ನ ಲಾಗಿದೆ. ನಿಸಾಮುದ್ದೀನ್ 277 ಗ್ರಾಂ ನಕಲಿ ಚಿನ್ನಾಭರಣವನ್ನು ಹಣಕಾಸು ಸಂಸ್ಥೆಯಲ್ಲಿ ಅಡವಿರಿಸಿ 13,45,025 ರೂಪಾಯಿ ಲಪಟಾಯಿಸಿರುವುದಾಗಿ ದೂರಲಾಗಿದೆ.  ಸಿಬ್ಬಂದಿಗಳ ಅರಿವಿ ನೊಂದಿಗೆ ನಕಲಿ ಚಿನ್ನಾಭರಣ ಅಡವಿರಿ ಸಲಾಗಿದೆಯೆಂದು ಆರೋಪಿಸಲಾಗಿದೆ. ಇದೇ ವೇಳೆ ನಿಸಾಮುದ್ದೀನ್ ನಾಪತ್ತೆ ಯಾಗಿ ರುವುದಾಗಿ ದೂರಲಾಗಿದೆ. ನಿಸಾಮುದ್ದೀನ್ ನಾಪತ್ತೆಯಾದ ಬಗ್ಗೆ ಮನೆಯವರು ನೀಡಿದ ದೂರಿನಂತೆ ಕುಂಬಳ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page