ಹಣದ ವಿವಾದ: ನಡು ರಸ್ತೆಯಲ್ಲಿ ದೇಹದ ಮೇಲೆ ಪೆಟ್ರೋಲ್ ಸುರಿದು ಯುವತಿಯ ಕೊಲೆಗೆ ಯತ್ನ

ಕಾಸರಗೋಡು: ಸಾಲವಾಗಿ ನೀಡಿದ ಹಣ ಹಿಂತಿರುಗಿ ಕೇಳಿದ ಯುವತಿಯ ದೇಹದ ಮೇಲೆ ನಡು ರಸ್ತೆಯಲ್ಲೇ ಪೆಟ್ರೋಲ್ ಸುರಿದು ಆಕೆಯನ್ನು ಕೊಲೆಗೈಯ್ಯಲೆತ್ನಿಸಿದ ಘಟನೆ ನಡೆದಿದೆ.

ಹೊಸದುರ್ಗ ಕೊಡಕ್ಕಾಡ್ ನಿವಾಸಿಯಾಗಿರುವ ೪೧ರ ಹರೆಯದ ಯುವತಿ ಈ ಬಗ್ಗೆ ವೆಳ್ಳರಿಕುಂಡು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪ್ರಶಾಂತ್ ಅಲಿಯಾಸ್ ದೀಪು ಎಂಬಾತನ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಡಿದ್ದಾರೆ.

ಕೊಡಕ್ಕಾಡ್ ಪೇಟೆಯಲ್ಲಿ ನಿನ್ನೆ ಅಪರಾಹ್ನ ಈ ಘಟನೆ ನಡೆದಿದೆ. ಎರಡು ಪ್ಲಾಸ್ಟಿಕ್ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿ ಬಂದ  ಆರೋಪಿ ಅದನ್ನು ತನ್ನ ಮೇಲೆ ಸುರಿದು ಬೆಂಕಿ ಪೊಟ್ಟಣ ಉರಿಸಿ  ನನ್ನ ಮೇಲೆ ಬೆಂಕಿ ಹಚ್ಚಲು ಯತ್ನಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ. ಯುವತಿ ಆರೋಪಿಗೆ ಹಣ ಸಾಲ ನೀಡಿದ್ದಳು. ಅದನ್ನು ಹಿಂತಿರುಗಿಸುವಂತೆ ಆಕೆ ಆತನಲ್ಲಿ  ಕೇಳಿದ್ದು, ಹಣ ಹಿಂತಿರುಗಿಸದಾಗ ಆಕೆ ಆತನ ಮೊಬೈಲ್ ಫೋನ್ ಕೈವಶವಿರಿಸಿಕೊಂಡಿದ್ದಳೆಂದೂ ಆ ದ್ವೇಷವೇ ಇದಕ್ಕೆಲ್ಲಾ ಕಾರಣವೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page