ಹರಿಜಾಲ್ ಶ್ರೀ ಧೂಮಾವತಿ ದೈವಸ್ಥಾನದಲ್ಲ್ಲಿ ನೇಮೋತ್ಸವ ನಾಳೆಯಿಂದ
ಮೊಗ್ರಾಲ್ ಪುತ್ತೂರು: ಬಳ್ಳೂರು ಕಲ್ಲಂಗೈ ಹರಿಜಾಲ್ ಶ್ರೀ ಧೂಮಾ ವತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ನಾಳೆಯಿಂದ ನಡೆಯಲಿದೆ.
ನಾಳೆ ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, ಮುಡಿಪುಶುದ್ಧಿ, 9ಕ್ಕೆ ಭಜನೆ, ಮಧ್ಯಾಹ್ನ 1 ಗಂಟೆಗೆ ಶ್ರೀ ಧೂಮಾವತಿ ದೈವದ ತಂಬಿಲ ಸೇವೆ, ರಾತ್ರಿ 7ಕ್ಕೆ ಭಂಡಾರ ತೆಗೆಯುವುದು, 8ಕ್ಕೆ ಶ್ರೀ ಗುಳಿಗ ಹಾಗೂ ಉಪದೈವ ಗಳ ಕೋಲ, 9ಕ್ಕೆ ಶ್ರೀ ಕೊರತಿಯ ಮ್ಮನ ಕೋಲ ಬಳಿಕ ಅನ್ನಸಂತ ರ್ಪಣೆ, 25ರಂದು ಬೆಳಿಗ್ಗೆ 11ಕ್ಕೆ ಶ್ರೀ ಧೂಮಾವತಿ ದೈವದ ನೇಮ, ಮಧ್ಯಾಹ್ನ 12ಕ್ಕೆ ಹರಿಜಾಲ್ ಶ್ರೀ ಮಹಾವಿಷ್ಣು ಕ್ಷೇತ್ರಕ್ಕೆ ದೈವದ ಭೇಟಿ, 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 4ಕ್ಕೆ ಭಂಡಾರ ಇಳಿಯುವುದು, 6ಕ್ಕೆ ಒಂದುಕಮ್ಮಿ ನಲ್ವತ್ತು ದೈವದ ಕೋಲ, 7ಕ್ಕೆ ಶ್ರೀ ಕೊರಗತನಿಯ ದೈವದ ಕೋಲ, ಬಳಿಕ ಅನ್ನಸಂತರ್ಪಣೆ ನಡೆಯಲಿರುವುದು.