ಹೊಸದುರ್ಗ: ಹಲವು ಪ್ರಕರಣಗಳಲ್ಲಿ ಆರೋಪಿಯಾದ ಯುವಕನನ್ನು ಕಾಪಾ ಪ್ರಕಾರ ಬಂಧಿಸಿ ಜೈಲಿನಲ್ಲಿರಿಸಲಾಗಿದೆ. ವೆಳ್ಳಿಕೋತ್ ಕುಂಞಿಪ್ಪುರದ ವಿಶಾಖ್ ಯಾನೆ ಜಿತ್ತು (೨೪) ಎಂಬಾತನನ್ನು ಜಿಲ್ಲಾಧಿಕಾರಿ ಕೆ. ಇಂಭಶೆಖರ್‌ರ ನಿರ್ದೇಶ ಪ್ರಕಾರ ಡಿವೈಎಸ್ಪಿ ಎಂ.ಪಿ. ವಿನೋದ್ ಕುಮಾರ್‌ರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಎಂ.ಪಿ. ಆಜಾದ್ ಬಂಧಿಸಿದ್ದಾರೆ. ಚಂದೇರ, ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹತ್ಯೆಯತ್ನ, ಹಣಕಳವು, ಹೊಡೆದಾಟ, ಗಾಂಜಾ ಮೊದಲಾದ ಆರು ಪ್ರಕರಣಗಳಲ್ಲಿ ವಿಶಾಖ್ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.
