ಹೃದಯಾಘಾತ: ಗ್ರಾಫಿಕ್ ಡಿಸೈನರ್ ನಿಧನ

ನೆಲ್ಲಿಕಟ್ಟೆ: ಇಲ್ಲಿಗೆ ಸಮೀಪದ ಪೈಕ ನಿವಾಸಿ ಹುದೈಫ್ (20) ನಿಧನ ಹೊಂದಿದರು. ರಾತ್ರಿ ಊಟ ಮಾಡಿ ಮಲಗಿದ್ದ ಇವರು ಬೆಳಿಗ್ಗೆ ಏಳದ ಹಿನ್ನೆಲೆಯಲ್ಲಿ ಮನೆ ಮಂದಿ ನೋಡಿದಾಗ ನಿಧನ ಹೊಂದಿರುವುದು ತಿಳಿದು ಬಂದಿದೆ. ಹೃದಯಾಘಾತ ನಿಧನಕ್ಕೆ  ಕಾರಣವೆನ್ನಲಾಗಿದೆ. ಪಿ.ಎಂ. ನಾಸರ್- ರಂಲ ದಂಪತಿ ಪುತ್ರನಾಗಿದ್ದಾರೆ. ಎರ್ನಾಕುಳಂನಲ್ಲಿ ಖಾಸಗಿ ಕಂಪೆನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿದ್ದ ಹುದೈಫ್ ಸಹೋದರನ ಮದುವೆ ಕಾರ್ಯಕ್ರಮಕ್ಕಾಗಿ ಊರಿಗೆ ತಲುಪಿದ್ದರು. ನಿನ್ನೆ ರಾತ್ರಿ ಹಿಂತಿರುಗಲು ತೀರ್ಮಾನಿಸಿದ್ದರು. ಆದರೆ ಮೊನ್ನೆ ರಾತ್ರಿ ನಿಧನ ಸಂಭವಿಸಿದೆ.

ಮೃತರು ತಂದೆ, ತಾಯಿ, ಸಹೋದರರಾದ ರಿಸ್ವಾನ್, ಗಜಾಲಿ, ಜಾಸಿಂ, ಸಹೋದರಿ ಐಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನ ಸ್ಥಳೀಯರಲ್ಲಿ  ಶೋಕಸಾಗರ ಸೃಷ್ಟಿಸಿದೆ.

You cannot copy contents of this page