ಹೃದಯಾಘಾತ ಛಾಯಾಗ್ರಾಹಕ ನಿಧನ

ಅಡೂರು: ಇಲ್ಲಿ ಪ್ರಭಾ  ಸ್ಟುಡಿಯೊ ಹೊಂದಿದ್ದ ಛಾಯಾಗ್ರಾಹಕ ಪ್ರಭಾಕರ ರೈ (47) ಹೃದಯಾಘಾತದಿಂದ ನಿಧನ ಹೊಂದಿದರು. ಮೂಲತಃ ಕಾಟುಕುಕ್ಕೆ ನಿವಾಸಿಯಾಗಿದ್ದ ಇವರು ಪ್ರಸ್ತುತ ಪುತ್ತೂರು ನಿಂತಿಕಲ್ಲಿನ ಮರ್ವಂಜದಲ್ಲಿ ವಾಸವಾಗಿದ್ದು, ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪೆರ್ಲದ ಅನುಪಮ ಸ್ಟುಡಿಯೋದಲ್ಲಿ ಛಾಯಾಗ್ರಹಣ ವೃತ್ತಿ ಆರಂಭಿಸಿದ ಇವರು ಬದಿಯಡ್ಕದಲ್ಲೂ ಆ ಬಳಿಕ ಅಡೂರಿನಲ್ಲಿ ಸ್ಟುಡಿಯೊ ಆರಂಭಿಸಿದ್ದರು. ಕಲಾವಿದರಾಗಿದ್ದ ಇವರು ತುಳು ನಾಟಕಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು.

ನಿನ್ನೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಎದೆನೋವು ಕಂಡು ಬಂದಿದ್ದು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ವೀಣಾ ಪಿ. ರೈ, ಪುತ್ರಿ ಚಿನ್ಮಯಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page