ಉಪ್ಪಳ: ಬೇಕೂರು ನಿವಾಸಿ ಮರದ ಕೆಲಸಗಾರ ರಾಮಣ್ಣ ಆಚಾರ್ಯ (72) ನಿಧನರಾದರು. ಕಳೆದ ಆದಿತ್ಯವಾರ ಬೆಳಿಗ್ಗೆ ಇವರಿಗೆ ಮನೆಯಲ್ಲಿ ಹೃದಯಾಘಾತವುಂ ಟಾಗಿದ್ದು, ಮಂಗಳೂರಿನ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದರು.
ಮೃತರು ಪತ್ನಿ ರೇವತಿ, ಮಕ್ಕ ಳಾದ ಅಶ್ವಿನಿ, ಅಶ್ವತ್ಥ್ ಆಚಾರ್ಯ, ಅಳಿಯ ಯೋಗೀಶ ಆಚಾರ್ಯ, ಸಹೋದರ ಕೇಶವ ಆಚಾರ್ಯ, ಸಹೋದರಿಯರಾದ ಮೀನಾಕ್ಷಿ, ಸುಮತಿ, ಜಯಂತಿ, ಪುಷ್ಪ, ಲೀಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮನೆಗೆ ವಿವಿಧ ರಾಜಕೀ ಯ ನೇತಾರರು, ಕಾರ್ಯಕರ್ತರ ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.