ಹೆಚ್ಚುವರಿ ಚಿನ್ನಾಭರಣ, ನಗದು ಆಗ್ರಹಿಸಿ ದೌರ್ಜನ್ಯ: ಯುವತಿಯ ಕೂದಲೆಳೆದು, ಮೆಟ್ಟಿ, ಗಾಯಗೊಳಿಸಿದ ಬಗ್ಗೆ ದೂರು ; ಪತಿ ವಿರುದ್ಧ ಕೇಸು

ಕಾಸರಗೋಡು: ಹೆಚ್ಚುವರಿ ಚಿನ್ನಾಭರಣ, ನಗದು ಆಗ್ರಹಿಸಿ ಯುವತಿಗೆ ದೈಹಿಕ, ಮಾನಸಿಕವಾಗಿ ದೌರ್ಜನ್ಯಗೈದಿರುವುದಾಗಿ ನೀಡಿದ ದೂರಿನಲ್ಲಿ ಯುವಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಾಲೋತ್, ಪರಂಬ ರಸ್ತೆಯ ದೀಪಾ ಜೋಸೆಫ್ (22)ಳ ದೂರಿನಂತೆ ಪತಿ ಸ್ಟೀಫನ್ ಜೋಸೆಫ್ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿದ್ದಾರೆ. 2016 ಫೆಬ್ರವರಿ ೧ರಂದು ದೀಪಾ ಹಾಗೂ ಸ್ಟೀಫನ್ ಮಧ್ಯೆ ಧಾರ್ಮಿಕ ವಿಧಿ ಪ್ರಕಾರ ವಿವಾಹ ನಡೆದಿತ್ತು. ಮದುವೆಯ ಮರುದಿನದಿಂದ 2025 ಎಪ್ರಿಲ್ 29ರವರೆಗೆ ಹೆಚ್ಚುವರಿ ಹಣ, ಚಿನ್ನಾಭರಣ ಆಗ್ರಹಿಸಿ ದೌರ್ಜನ್ಯಗೈಯ್ಯುತ್ತಿ ದ್ದುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಎಪ್ರಿಲ್ 27ರಂದು ರಾತ್ರಿ ದೀಪಾಳ ಕೂದಲು ಹಿಡಿದು ಕೈಯಿಂದ ಹಲ್ಲೆಗೈದು, ಕಾಲಿನಿಂದ ಮೆಟ್ಟಿ ಗಾಯಗೊಳಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page