ಹೆಣ್ಮಕ್ಕಳಿಗೆ ಮದ್ಯ ನೀಡಿರುವುದು ತಾಯಿ, ತಾಯಿಯ ಗೆಳೆಯ: ಕ್ಲಾಸ್ ಟೀಚರ್‌ರ ನಿರ್ಣಾಯಕ ಹೇಳಿಕೆ
ಕೊಚ್ಚಿ: ಕುರುಪ್ಪಂಪಡಿ ದೌರ್ಜನ್ಯ ಪ್ರಕರಣದಲ್ಲಿ 10, 12 ವರ್ಷ ಪ್ರಾಯದ ಹೆಣ್ಮಕ್ಕಳಿಗೆ ತಾಯಿ ಹಾಗೂ ತಾಯಿಯ ಗೆಳೆಯ ಮದ್ಯ ನೀಡಿರುವುದಾಗಿ ಹೇಳಿಕೆ ದಾಖಲಿಸಲಾಗಿದೆ. ಆರೋಪಿ ಧನೇಶ್ ಮನೆಗೆ ತಲುಪುವಾಗಲೆಲ್ಲ ಒತ್ತಾಯಪೂರ್ವಕ ಮದ್ಯ ನೀಡಿರುವುದಾಗಿಯೂ ಹೆಣ್ಮಕ್ಕಳು ತಿಳಿಸಿದ್ದಾರೆ. ಗೆಳತಿಗೆ ಬರೆದ ಪತ್ರವನ್ನು ಓದಿದ ಕ್ಲಾಸ್‌ಟೀಚರ್‌ರಲ್ಲಿ 12 ವರ್ಷದ ಬಾಲಕಿ ನಡೆದ ವಿಷಯವನ್ನೆಲ್ಲಾ ತಿಳಿಸಿದ್ದಳು.
ಮದ್ಯ ನೀಡಿದ್ದಾರೆ ಎಂದು ಟೀಚರ್ ತಿಳಿಸಿದ ಮಾಹಿತಿ ರಹಸ್ಯ ಹೇಳಿಕೆಯಲ್ಲಿ ದಾಖಲಾಗದ ಕಾರಣ ಹೆಣ್ಮಕ್ಕಳ ಹೇಳಿಕೆಯನ್ನು ಪೊಲೀಸರು ಮತ್ತೆ ಪಡೆದುಕೊಂಡಿದ್ದಾರೆ. ದೌರ್ಜನ್ಯದ ಬಗ್ಗೆ ಮರೆ ಮಾಚಿರು ವುದಕ್ಕೆ ತಾಯಿ ವಿರುದ್ಧವೂ ದಾಖ ಲಿಸಿದ ಪೋಕ್ಸೋ ಪ್ರಕರಣದಲ್ಲಿ ಒತ್ತಾಯಪೂರ್ವಕ ಮದ್ಯ ನೀಡಿರು ವುದಕ್ಕೂ ಕೇಸು ದಾಖಲಿಸಲಾಗಿದೆ. ಮೆಜಿಸ್ಟ್ರೇಟ್ ನ್ಯಾಯಾಲಯ ಹೆಣ್ಮಕ್ಕಳ ರಹಸ್ಯ ಹೇಳಿಕೆ ದಾಖಲಿ ಸಿತ್ತು. ಈ ಬಾಲಕಿಯರ ಸಂರಕ್ಷಣೆ ಯನ್ನು ಶಿಶು ಕ್ಷೇಮ ಸಮಿತಿ ವಹಿಸಿಕೊಂಡಿದೆ. ೩ ವರ್ಷದ ಹಿಂದೆ ಇವರ ತಂದೆ ಮೃತಪಟ್ಟಿದ್ದರು. ತಾಯಿ ಅಸೌಖ್ಯಕ್ಕೀಡಾಗಿದ್ದ ಸಮಯದಲ್ಲಿ ಆಸ್ಪತ್ರೆಗೆ ಕೊಂಡುಹೋಗುವುದಕ್ಕಾಗಿ ಕರೆಯಲಾಗಿದ್ದ ವಾಹನ ಚಾಲಕ ಧನೇಶ್ ಮಕ್ಕಳನ್ನು ದೌರ್ಜನ್ಯಗೈದ ಆರೋಪಿಯಾಗಿದ್ದಾನೆ.
ತಂದೆಯ ಸಾವಿನ ಬಳಿಕ ಧನೇಶ್ ಕುಟುಂಬದೊಂದಿಗೆ ಹೆಚ್ಚು ಸಂಪರ್ಕ ಇರಿಸಿಕೊಂಡಿದ್ದನು. ಬಳಿಕ ಶನಿವಾರ, ಆದಿತ್ಯವಾರಗಳಂದು ಖಾಯಂ ಆಗಿ ಮನೆಗೆ ಬರಲು ಆರಂಭಿಸಿದನು. ಧನೇಶ್ ಲೈಂಗಿಕವಾಗಿ ಉಪಟಳ ನೀಡುವ ಮಾಹಿತಿಯನ್ನು ಬಾಲಕಿಯರಲ್ಲಿ ಓರ್ವೆ ಗೆಳೆಯನಲ್ಲಿ ತಿಳಿಸಿದ್ದಳು. ಈತ ಈ ಮಾಹಿ ತಿಯನ್ನು ಶಾಲಾ ಅಧಿಕಾರಿಗಳಿಗೆ ತಿಳಿಸಿದ್ದಾನೆ.